ಮೈಸೂರಿನಲ್ಲಿ ಕಾಡಾನೆ ಆತಂಕ!

ಮೈಸೂರಿನಲ್ಲಿ ಕಾಡಾನೆ ಆತಂಕ!

ಅರಣ್ಯ ಇಲಾಖೆ ವಾಹನವನ್ನು ಚೇಸ್ ಮಾಡಿದ ಒಂಟಿ ಸಲಗ

ಮೈಸೂರು: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ಕಾಡಾನೆ ಅರಣ್ಯ ಇಲಾಖೆ ವಾಹನವನ್ನು ಚೇಸ್ ಮಾಡಿದ ಘಟನೆ ಆತಂಕ ಮೂಡಿಸಿದೆ. ಅರಣ್ಯ ಅಂಚಿನ ಬಳಿ ರೈಲು ಕಂಬಿ ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶದಲ್ಲಿ ಒಂಟಿ ಸಲಗ ಸಂಚರಿಸುತ್ತಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಇರುವ ವಾಹನವನ್ನು ಕಂಡ ತಕ್ಷಣ ಕಾಡಾನೆ ಘೀಳಿಟ್ಟು ದೌಡಾಯಿಸಿದೆ. ಬ್ಯಾರಿಕೇಡ್ ಒಳಗಿಂದಲೇ ವಾಹನದತ್ತ ನುಗ್ಗಲು ಯತ್ನಿಸಿದ ಕಾಡಾನೆ, ಅಡ್ಡಿಯಿದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *