ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 3ನೇ ಏಕದಿನ ಪಂದ್ಯವು ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂದೋರ್ಗೆ ಆಗಮಿಸಿರುವ ವಿರಾಟ್ ಕೊಹ್ಲಿ ಉಜ್ಜಯಿನಿಯಲ್ಲಿರುವ ಶ್ರೀ ಮಹಾಕಾಳೇಶ್ವರನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಕೊಹ್ಲಿ ತನ್ನ ಸಹ ಆಟಗಾರ ಕುಲ್ದೀಪ್ ಯಾದವ್ ಅವರೊಂದಿಗೆ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಅಲ್ಲದೆ ಕೆಲ ಹೊತ್ತು ದೇವರ ಸನ್ನಿಧಿಯಲ್ಲೇ ಸಮಯ ಕಳೆದರು.
ಇದೀಗ ವಿರಾಟ್ ಕೊಹ್ಲಿ ಮಹಾಕಾಳೇಶ್ವರನಿಗೆ ತಲೆಬಾಗಿ ಪ್ರಾರ್ಥಿಸುತ್ತಿದ್ದಾರೆ. ಅಂದಹಾಗೆ ಕೊಹ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ.
For More Updates Join our WhatsApp Group :




