HDK ಸಂವಾದದಲ್ಲಿ ಭವಿಷ್ಯದ ಆಸ್ಪತ್ರೆ ಯೋಜನೆ ಘೋಷಣೆ.
ಹೈದರಾಬಾದ್ : ಅಪೋಲೋ ಹಾಸ್ಪಿಟಲ್ಸ್ ವತಿಯಿಂದ ಹೈದರಾಬಾದ್ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ ಸಂವಾದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವರ್ಷದ 365 ದಿನವೂ ತನ್ನ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಭವಿಷ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಅಪೋಲೋ ಘೋಷಿಸಿದೆ. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಹಾಗೂ ಆನ್ಲೈನ್ ಮೂಲಕ 27,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು ಸಾಧ್ಯವಿಲ್ಲ: ಡಾ. ಪ್ರತಾಪ್ ಸಿ. ರೆಡ್ಡಿ
ಅಪೋಲೋ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಮಾತನಾಡಿ, ಅಪೋಲೋ ಆಸ್ಪತ್ರೆಗಳು ರಜಾದಿನಗಳು ಸೇರಿದಂತೆ ವರ್ಷದ 365 ದಿನಗಳು 24×7 ಕಾರ್ಯನಿರ್ವಹಿಸಲಿವೆ ಎಂದು ಘೋಷಿಸಿದರು. ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು ಸಾಧ್ಯವಿಲ್ಲ. ಕೆಲಸದ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿದಿನವೂ ಆರೋಗ್ಯ ರಕ್ಷಣೆಗೆಗಾಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಆರೋಗ್ಯ ರಕ್ಷಣೆ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ, ನಮ್ಮ ದೈನಂದಿನ ಜೀವನದಲ್ಲಿದೆ ಎಂದು ಹೇಳಿದ್ದಾರೆ.
ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಹೇಳಿದ್ದಿಷ್ಟು
ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಮಾತನಾಡಿ, ಅಪೋಲೋ ಸಂಸ್ಥೆಯ ತಂತ್ರಜ್ಞಾನ ಮಾರ್ಗಸೂಚಿಯನ್ನು ವಿವರಿಸಿದರು. ಆಸ್ಪತ್ರೆಗಳೊಳಗಿನ ಸೀಮಿತ ಚಿಕಿತ್ಸೆಯಿಂದ ಹೊರಬಂದು, ನಿರಂತರ ಆರೋಗ್ಯ ನಿರ್ವಹಣೆಯತ್ತ ಸಾಗುವ ವ್ಯವಸ್ಥೆಯೇ ಅಪೋಲೋದ ಗುರಿ ಎಂದರು. ಹೈದರಾಬಾದ್ನಲ್ಲಿ ನಿರ್ಮಾಣವಾಗಲಿರುವ ಹೊಸ ಸೌಲಭ್ಯವುಳ್ಳ ಆಸ್ಪತ್ರೆ ವಿಶಾಲ ಆರೋಗ್ಯ ವ್ಯವಸ್ಥೆ ನಿರ್ಮಿಸುವ ಪ್ರಯತ್ನದ ಒಂದು ಭಾಗವಾಗಿರುತ್ತದೆ ಎಂದಿದ್ದಾರೆ.
For More Updates Join our WhatsApp Group :




