ತಡರಾತ್ರಿ ವಿತರಣಾ ಏಜೆಂಟ್ ಬೆಚ್ಚಿಬೀಳಿಸಿದ ಘಟನೆ.
ನವದೆಹಲಿ : ಸಾಮಾನ್ಯವಾಗಿ ರಾತ್ರಿ ಹೊತ್ತು ಸ್ಮಶಾನದ ಅಕ್ಕಪಕ್ಕದ ಜಾಗದಲ್ಲಿ ಹಾದುಹೋಗುವಾಗಲೇ ಜೀವ ಬಾಯಿಗೆ ಬಂದಂಥಾ ಅನುಭವವಾಗುತ್ತೆ. ಇನ್ನು ಸ್ಮಶಾನದಿಂದಲೇ ಕಾಲ್ ಬಂದರೆ ಭಯವಾಗದೇ ಇದ್ದೀತೆ. ಆಹಾರ ವಿತರಣಾ ಏಜೆಂಟ್ಗೆ ತಡರಾತ್ರಿ ಸ್ಮಶಾನದಿಂದ ಕರೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಣ್ಣ ವಿಡಿಯೋದಲ್ಲಿ ಡೆಲಿವರಿ ಏಜೆಂಟ್ ಗ್ರಾಹಕನಿಗೆ ಕರೆ ಮಾಡಿ ಆ ಜಾಗವನ್ನು ತಲುಪಿದ್ದರು. ಫೋನ್ನಲ್ಲಿರುವ ಮಹಿಳೆ ಶಾಂತವಾಗಿ ಅವರಿಗೆ ಮುಂದೆ ನಡೆಯಲು ಹೇಳುತ್ತಾಳೆ. ನಾಯಿಯನ್ನು ತೋರಿಸುತ್ತಾಳೆ ಮತ್ತು ಚಿಂತಿಸಬೇಡಿ ಎಂದೂ ಹೇಳುತ್ತಾಳೆ. ಆದರೆ ಏಜೆಂಟ್ ಮುಂದೆ ಹೆಜ್ಜೆ ಹಾಕಿದ ತಕ್ಷಣ ಮತ್ತು ಮಾರ್ಗವು ಸ್ಮಶಾನದತ್ತ ಸಾಗುತ್ತದೆ.
ಕೂಡಲೇ ಡೆಲಿವರಿ ಏಜೆಂಟ್ ಅಲ್ಲೇ ನಿಲ್ಲುತ್ತಾರೆ. ಪರಿಸ್ಥಿತಿಯನ್ನು ಅರಿತ ಅವನು ಒಳಗೆ ಹೋಗಲು ನಿರಾಕರಿಸುತ್ತಾರೆ, ಅಲ್ಲಿ ಸಂಪೂರ್ಣವಾಗಿ ಕತ್ತಲೆಯಿರುತ್ತದೆ. ನಾನು ಒಳಗೆ ಹೋಗುವುದಿಲ್ಲ, ಎಂದು ಆತ ಹೇಳುತ್ತಾರೆ. ಮಹಿಳೆ ಗೇಟ್ ಮೂಲಕ ಹೋಗಿ ಪಾರ್ಸೆಲ್ ಕೊಡುವಂತೆ ಒತ್ತಾಯಿಸುತ್ತಾಳೆ.
ಮಹಿಳೆ ತಾನು ಮತ್ತು ತನ್ನ ಸ್ನೇಹಿತರು ಸ್ಮಶಾನದ ಒಳಗೆ ಪಾರ್ಟಿ ಮಾಡುತ್ತಿದ್ದೇವೆ, ಅಲ್ಲೇ ಆಹಾರವನ್ನು ತಂದುಕೊಡುವಂತೆ ಕೇಳಿಕೊಳ್ಳುತ್ತಾಳೆ.ಏಜೆಂಟ್ ಮತ್ತಷ್ಟು ಹಿಂಜರಿದಾಗ, ನೀವು ದೆವ್ವಗಳಿಗೆ ಹೆದರಿದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡುತ್ತಾಳೆ. ಅದಕ್ಕೆ ಡೆಲಿವರಿ ಏಜೆಂಟ್ ನನಗೆ ಭಯ ಇರುವುದು ಮೂಢನಂಬಿಕೆ, ದೆವ್ವಗಳಿಗೆ ಅಲ್ಲ, ರಾತ್ರ ಹೊತ್ತು ಯಾರಾದರೂ ಏನಾದರೂ ಮಾಡಿದರೆ ಎನ್ನುವ ಭಯವಿದೆ ಎಂದು ಹೇಳುತ್ತಾರೆ.
ಅನೇಕ ನೆಟ್ಟಿಗರು ಡೆಲಿವರಿ ಏಜೆಂಟ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವಿತರಣಾ ಏಜೆಂಟ್ಗಳು ಮನುಷ್ಯರು, ರೋಬೋಟ್ಗಳಲ್ಲ ಎಂಬುದನ್ನು ಮರೆತುಬಿಡುತ್ತಾರೆ ಜನರು ಅನೇಕ ಸಂದರ್ಭಗಳಲ್ಲಿ ಮರೆಯುತ್ತಾರೆ ಎಂದು ಹೇಳಿದ್ದಾರೆ.
For More Updates Join our WhatsApp Group :




