ರೇಣುಕಾ ಸ್ವಾಮಿ ಕೊ* ಪ್ರಕರಣ: ಪವಿತ್ರಾಗೆ ಮಧ್ಯಂತರ ಜಾಮೀನು ನಿರಾಕರಣೆ.

ರೇಣುಕಾ ಸ್ವಾಮಿ ಕೊ* ಪ್ರಕರಣ: ಪವಿತ್ರಾಗೆ ಮಧ್ಯಂತರ ಜಾಮೀನು ನಿರಾಕರಣೆ.

ಮಗಳಿಗೆ ಪರೀಕ್ಷೆ ಸಮೀಪವಿದ್ದರೂ ಕೋರ್ಟ್ ಜಾಮೀನನ್ನು ನೀಡಲು ತಿರಸ್ಕರಿಸಿದೆ.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ಎ1 ಆಗಿರೋ ಪವಿತ್ರಾ ಗೌಡ ಅವರು ಜಾಮೀನು ಪಡೆಯಬೇಕು ಎಂದು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈಗ ಮಗಳಿಗೆ ಪರೀಕ್ಷೆ ಸಮೀಪಿಸಿದ್ದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಪವಿತ್ರಾ ಅವರು ಕೋರ್ಟ್​​ನಲ್ಲಿ ಕೋರಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಜೈಲುವಾಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪವಿತ್ರಾ ಗೌಡ ಅವರು ದರ್ಶನ್ ಆಪ್ತೆ ಎನಿಸಿಕೊಂಡಿದ್ದರು. ಇಬ್ಬರೂ ಲಿವಿನ್ ರಿಲೇಶನ್​ಶಿಪ್​​ನಲ್ಲಿ ಇದ್ದ ಬಗ್ಗೆ ಚಾರ್ಜ್​ಶಿಟ್​​ನಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಾಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಕಿರುಕುಳ ನೀಡಿದ್ದ. ಈ ವಿಷಯ ದರ್ಶನ್ ಕಿವಿಗೂ ಬಿತ್ತು. ಹೀಗಾಗಿ, ಆತನನ್ನು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆ ಶೆಡ್​​ನಲ್ಲಿ ಆತನ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ವೇಳೆ ಪವಿತ್ರಾ ಗೌಡ, ದರ್ಶನ್ ಕೂಡ ಸ್ಥಳದಲ್ಲಿ ಇದ್ದರು ಮತ್ತು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆಗಿದ್ದಾರೆ. ಪವಿತ್ರಾಗೆ ಇರೋದು ಎಂದರೆ ಮಗಳು ಮಾತ್ರ. ಅವಳಿಗೆ ಪರೀಕ್ಷೆ ಸಮೀಪಿಸಿದೆ. ಹೀಗಾಗಿ, 25 ದಿನಗಳ ಮಧ್ಯಂತ ಜಾಮೀನು ನೀಡಿ ಎಂದು ಕೋರ್ಟ್​ ಅಲ್ಲಿ ಮನವಿ ಮಾಡಿದ್ದರು. ಆದರೆ, ಇದನ್ನು ಕೋರ್ಟ್​ ನಿರಾಕರಿಸಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೆ ಜಾಮೀನು ನೀಡಲು ನಿರಾಕರಿಸಿದೆ.

ಈ ಮೊದಲು ಪವಿತ್ರಾ ಅವರು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಜೈಲು ಊಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದರು. ಕೆಲ ದಿನ ಇದಕ್ಕೆ ಅವಕಾಶ ಇತ್ತು. ನಂತರ ಇದನ್ನು ರದ್ದು ಮಾಡಲಾಯಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *