ಜಾತ್ರೆ ಅಂಗವಾಗಿ ಬರಿಗಾಲಿನಲ್ಲಿ ಸಾಧನೆ.
ಹಾವೇರಿ : ಕುರವತ್ತಿ ಬಸವೇಶ್ವರ ಜಾತ್ರೆ ಅಂಗವಾಗಿ ಹಾವೇರಿ ತಾಲೂಕಿನ ಗುತ್ತಲ ಗ್ರಾಮದ 6 ವರ್ಷದ ಸಮರ್ಥ ಶಿವಯೋಗಿ ಕಾಗಿನಲ್ಲಿ ಸುಮಾರು 13 ಕಿಮೀ ದೂರವನ್ನು ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿ ಜನರ ಗಮನ ಸೆಳೆದಿದ್ದಾನೆ. ಎರಡೂವರೆ ಗಂಟೆಯಲ್ಲಿ ಗುರಿ ತಲುಪಿದ ಬಾಲಕ ಕುಟುಂಬದವರೊಂದಿಗೆ ರಥೋತ್ಸವದಲ್ಲಿ ಭಾಗಿಯಾಗಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
For More Updates Join our WhatsApp Group :




