“ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ?” – ಪತ್ನಿಗೆ ಉಸಿರುಗಟ್ಟಿಸಿ ಕೊ*.

“ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ?” – ಪತ್ನಿಗೆ ಉಸಿರುಗಟ್ಟಿಸಿ ಕೊ*.

ಇಸ್ರೋ ನಿವೃತ್ತ ನೌಕರ ಬಂಧನ; ಮಾನಸಿಕ ಅಸ್ವಸ್ಥತೆ ಶಂಕೆ.

ಬೆಂಗಳೂರು ಇಸ್ರೋ ಸಂಸ್ಥೆ ನಿವೃತ್ತ ನೌಕರನಿಂದ ಉಸಿರುಗಟ್ಟಿಸಿ ಪತ್ನಿಯ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನಡೆದಿದೆ. ಪತ್ನಿ ಸಧ್ಯಾರ ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್​​ರಿಂದ ಕೊಲೆ ಮಾಡಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆಲವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು

ನಾಗಲೇಶ್ವರ ರಾವ್​​, ಇಸ್ರೋ ಸಂಸ್ಥೆಯ ನಿವೃತ್ತ ನೌಕರರು. ಪತ್ನಿ ಸಧ್ಯಾ ಅವರೊಂದಿಗೆ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನೆಲೆಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ, ಯಾರೂ ಸಂಬಂಧಿಕರು ಇಲ್ಲ ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನ ಕೊಲೆ ಮಾಡಿದೆ ಎನ್ನುತ್ತಿರುವ ನಾಗಲೇಶ್ವರ ರಾವ್, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ.​​​ ಇನ್ನು ದಂಪತಿಯ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ: ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ

ಮತ್ತೊಂದು ಪ್ರಕರಣದಲ್ಲಿ ಕೂಡ ಪತಿ ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ದೇವಿಕಾ(50) ಹತ್ಯೆಗೈದ ಪತಿ ಕುಮಾರ್. ಸದ್ಯ ಕೊಲೆ ಆರೋಪಿ ಕುಮಾರ್​ನನ್ನು ಬಂಧಿಸಿದ ಪೊಲೀಸರು, ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ ಅನುಮಾನ ಹೊಂದಿದ್ದ ಆರೋಪಿ ಪತಿ ಕುಮಾರ್, ನಿನ್ನೆ ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ದೇವಿಕಾರನ್ನು ಕೊಲೆ ಮಾಡಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಕೂಡಲೇ ಆರೋಪಿ ಕುಮಾರ್​ನನ್ನ ಮಕ್ಕಳು ತಡೆದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *