ಪ್ರವಾಹ ಹಾನಿಗೆ ಪ್ರತಿಯಾಗಿ 80 ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ.

ಪ್ರವಾಹ ಹಾನಿಗೆ ಪ್ರತಿಯಾಗಿ 80 ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ.

ಗ್ರೀನ್ ಉಧಮ್ಪುರಮಿಷನ್: ಪರಿಸರ ಪುನರ್ ಸ್ಥಾಪನೆಗೆ ಕ್ರಮ

ಉಧಮ್ಪುರ: ಉಧಮ್ಪುರ ಜಿಲ್ಲೆಯಲ್ಲಿನ ಆಗಸ್ಟ್–ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಿದ ಭಾರಿ ಮಳೆ ಹಾಗೂ ದಿಢೀರ್ ಪ್ರವಾಹದಿಂದ ಅರಣ್ಯ ಮತ್ತು ಕಂದಾಯ ಪ್ರದೇಶಗಳಿಗೆ ಭಾರೀ ಹಾನಿಯಾಗಿದೆ. ಭೂಮಿ ಹಾಗೂ ಸಾವಿರಾರು ಮರಗಳು ನಾಶವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪುನಶ್ಚೇತನ ಕಾರ್ಯಕ್ಕೆ ಕೈ ಹಾಕಿದೆ.

ವೇಗವಾಗಿ ಬೆಳೆಯುವ ನೀಲಗಿರಿ ಸೇರಿದಂತೆ ವಿವಿಧ ಸಸ್ಯಗಳನ್ನು ಜನರಿಗೆ ಉಚಿತವಾಗಿ ವಿತರಿಸಲಾಗಿದ್ದು, ಇದುವರೆಗೆ 80,000 ರಿಂದ 85,000 ಸಸಿಗಳನ್ನು ಹಂಚಲಾಗಿದೆ ಎಂದು ಮಾಹಿತಿ ನೀಡಿದರು. ‘ಗ್ರೀನ್ ಉಧಮ್ಪುರ’ ಮಿಷನ್ ಅಡಿಯಲ್ಲಿ, ಜೆ & ಕೆ ಅರಣ್ಯ ಇಲಾಖೆಯ ಕೇಂದ್ರ ನರ್ಸರಿಗಳು ಮಾಂಡ್ ಮತ್ತು ಪಂಗ್ರಾ ಪ್ರದೇಶಗಳಲ್ಲಿ 80,000 ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿ ವಿತರಿಸುತ್ತಿವೆ. 2025ರ ಆಗಸ್ಟ್ನಲ್ಲಿ ಸಂಭವಿಸಿದ ತೀವ್ರ ಮಳೆ ಹಾಗೂ ಪ್ರವಾಹದಿಂದ ನೈಸರ್ಗಿಕ ಮೇಲಾವರಣ ನಾಶವಾಗಿದ್ದ ಹಿನ್ನೆಲೆ, ಪರಿಸರ ಪುನರ್ ಸ್ಥಾಪನೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಅರಣ್ಯ ಇಲಾಖೆಯ ಈ ಅಭಿಯಾನದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಹಸಿರು ವಾತಾವರಣ ಮರುಸ್ಥಾಪನೆಗೊಳ್ಳುವ ನಿರೀಕ್ಷೆಯಿದೆ. ಸ್ಥಳೀಯರು ಸಹ ಅಭಿಯಾನಕ್ಕೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *