ಹಾಸನ ಮಹಾನಗರ ಪಾಲಿಕೆ: ಅಧಿಕಾರಿಗಳ ನಡುವೆ ‘ಕ್ಯಾಮರಾ’ ವಾರ್.

ಹಾಸನ ಮಹಾನಗರ ಪಾಲಿಕೆ: ಅಧಿಕಾರಿಗಳ ನಡುವೆ ‘ಕ್ಯಾಮರಾ’ ವಾರ್.

ಸಿಸಿ ಕ್ಯಾಮರಾ ತೆರವುಗೊಳಿಸಿದ ಮ್ಯಾನೇಜರ್ ಪ್ರಕಾಶ್

ಹಾಸನ : ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕಲಹ ವರದಿಯಾಗಿದೆ. ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ದಾಖಲಾತಿಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಮ್ಯಾನೇಜರ್ ಪ್ರಕಾಶ್ ಸೂಚನೆಯಂತೆ ತೆರವುಗೊಳಿಸಲಾಗಿದೆ.

ಬೇರೆ ಯಾವುದೇ ಸಿಬ್ಬಂದಿ, ಶಾಖೆಗೂ ಕ್ಯಾಮರಾ ಅಳವಡಿಸದೆ ತಮ್ಮ ಕಚೇರಿಗೆ ಮಾತ್ರ ಹಾಕಿರುವದಕ್ಕೆ ಪ್ರಕಾಶ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅನುಮತಿ ಕೇಳದೆ ಕ್ಯಾಮರಾ ಹೇಗೆ ಹಾಕಿದ್ರು ಎಂದು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಯು ಹಾಸನ ಮಹಾನಗರ ಪಾಲಿಕೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *