ನಿಂತು ಟಾಟಾ ಮಾತ್ರ ಮಾಡ್ಬೇಕಾ ಎಂದು ಕರಾವಳಿಗರು ಆಕ್ರೋಶ.
ಮಂಗಳೂರು : ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್ ಸೆಕ್ಷನ್‌ನ ಹಳಿ ವಿದ್ಯುದೀಕರಣ ಪೂರ್ತಿ ಆಗಿದೆ. ಇನ್ನೇನು ಕಡಲನಗರಿಗೆ ವಂದೇ ಭಾರತ್ ರೈಲು ಸಂಚಾರ ಮಾಡುತ್ತೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮಂಗಳೂರಿಗೆ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ವಂದೇ ಭಾರತ್ ರೈಲು ಮಂಗಳೂರು ಮೂಲಕವೇ ಹಾದು ಹೋದರೂ ಇಲ್ಲಿ ನಿಲುಗಡೆ ನೀಡದಿರುವುದು ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಹೆಬ್ಬಾಗಿಲನ್ನೇ ಮರೆತ ವಂದೇ ಭಾರತ್ ರೈಲು
ಕರಾವಳಿ ತೀರದಲ್ಲಿ ಕರ್ನಾಟಕದ ಹೆಬ್ಬಾಗಿಲೆಂದೇ ಪ್ರಸಿದ್ಧಿ ಪಡೆದ ಮಂಗಳೂರಿಗೆ ಎರಡು ವಂದೇ ಭಾರತ್ ರೈಲು ನೀಡುವುದಾಗಿ ಇತ್ತಿಚೇಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದರು. ಆದರೆ ಇದೀಗ ಮಂಗಳೂರು ಉಡುಪಿಗೆ ಈ ವಂದೇ ಭಾರತ್ ರೈಲು ಕೈ ತಪ್ಪುವ ಶಂಕೆ ಎದುರಾಗಿದೆ. ಯಶವಂತಪುರ-ಮಡಗಾಂವ್ ನಡುವೆ ಪ್ರಸ್ತಾವಿತ ವಂದೇ ಭಾರತ್ ರೈಲು ಮಂಗಳೂರು ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದರೂ ನಗರದಲ್ಲಿ ನಿಲುಗಡೆ ನೀಡದಿರುವುದು ರೈಲ್ವೆ ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ರೈಲು ನಿಲ್ದಾಣದಲ್ಲಿ ನಿಂತು ಕೇವಲ ಟಾಟಾ ಮಾತ್ರ ಮಾಡಬೇಕಾ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ರೈಲು ವೇಳಾಪಟ್ಟಿ ಹೀಗಿದೆ
ದಕ್ಷಿಣ-ಪಶ್ಚಿಮ ರೈಲ್ವೆಯ ಕಾರ್ಯಾಚರಣೆ ವಿಭಾಗ ಹೊರಡಿಸಿದ ಅಧಿಕೃತ ಪತ್ರದ ಪ್ರಕಾರ ಯಶವಂತಪುರ ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸೇವೆಗೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ. ಪ್ರಸ್ತಾವನೆಯಂತೆ ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ.
For More Updates Join our WhatsApp Group :




