ಕುಡಿಯುವ ನೀರಿನ ಅಶುದ್ಧತೆ: ಕಿಡ್ನಿ ಮತ್ತು ಲಿವರ್ ಸಮಸ್ಯೆಗಳ ಅಂಚು
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಗುಣಮಟ್ಟ ಕುರಿತು ಭಾರೀ ಆತಂಕ ಎತ್ತಿಕೊಂಡಿದೆ. ಜಿಲ್ಲೆಯ 1,274 ಹಳ್ಳಿಗಳ ಪೈಕಿ ನೂರಾರು ಗ್ರಾಮಗಳಲ್ಲಿ ನೀರು ಬಳಕೆಗೆ ಯೋಗ್ಯವಿಲ್ಲವೆಂದು ವರದಿ ಪ್ರಕಟವಾಗಿದೆ.ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ಲೋರೈಡ್ ಮತ್ತು ನೈಟ್ರೇಟ್ ಪತ್ತೆಯಾಗಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್ ನೀಡಿರುವ ಮಾಹಿತಿಯಂತೆ, ಅಶುದ್ಧ ನೀರಿನ ಸೇವನೆಯಿಂದ ಹಲ್ಲು ಮತ್ತು ಮೂಳೆಗಳ ಬೆಳವಣಿಗೆ ಕುಂಠಿತ, ಮೂಳೆ ಸವೆತ, ಅತಿಯಾದ ಸುಸ್ತು ಮತ್ತು ಎದೆಯುಸಿರು ಸಮಸ್ಯೆಯಾಗಿದೆ. ಕಿಡ್ನಿ (ಮೂತ್ರಪಿಂಡ) ಮತ್ತು ಲಿವರ್ (ಯಕೃತ್ತು) ಸಮಸ್ಯೆಗಳು ಹಾಗೂ ಬಹು ಅಂಗಾಂಗ ವೈಫಲ್ಯದ ಸಾಧ್ಯತೆ ಎಂದು ಹೇಳಿದ್ದಾರೆ.
ಕೇವಲ ನೀರಲ್ಲದೆ ತರಕಾರಿಗಳ ಮೂಲಕವೂ ಪ್ಲೋರೈಡ್ ಸೇರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಯೂರಿನ್ ಪರೀಕ್ಷೆ ನಡೆಸಲಾಗುತ್ತಿದೆ. ಟಿವಿ9 ಗೆ ಮಾಹಿತಿ ನೀಡಿದ ಜಿ.ಪಂ. ಸಿ.ಇ.ಓ ಡಾ. ನವೀನ್ ವೈ ಭಟ್, ಅಶುದ್ಧ ನೀರನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ. ಒಟ್ಟು 1,274 ಹಳ್ಳಿಗಳ ಪೈಕಿ 1,175 ಗ್ರಾಮಗಳಲ್ಲಿ (ಶೇ. 92ರಷ್ಟು) ಘಟಕಗಳನ್ನು ಸ್ಥಾಪಿಸಲಾಗಿದೆ. ಜನರ ಅನುಕೂಲಕ್ಕಾಗಿ ಪ್ರತಿ ಎರಡು ಕಿಲೋಮೀಟರ್‌ಗೆ ಒಂದರಂತೆ ಶುದ್ಧ ನೀರಿನ ಘಟಕ ಅಳವಡಿಸಲಾಗಿದೆ. ಜಿಲ್ಲೆಯ 10 ಗ್ರಾಮಗಳಲ್ಲಿ (ಚಿಕ್ಕಬಳ್ಳಾಪುರ-3, ಗೌರಿಬಿದನೂರು-5, ಶಿಡ್ಲಘಟ್ಟ-2) ನೀರು ಅತ್ಯಂತ ಅಶುದ್ಧವಾಗಿದ್ದು, ಆಯಾ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
For More Updates Join our WhatsApp Group :




