ಚಿಂಚಲಿ ಗ್ರಾಮದಲ್ಲಿ ದುರಂತ.
ಗದಗ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯ ಮೂವರು ಪೈಕಿ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿ ಸಾವನ್ನಪ್ಪಿರುವಂತಹ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ ವಡ್ಡರ ಮತ್ತು ಬಸವರಾಜ ಬಡಿಗೇರ ಮೃತ ವಿದ್ಯಾರ್ಥಿಗಳು. ಓರ್ವ ವಿದ್ಯಾರ್ಥಿ ಬಚಾವ್ ಆಗಿದ್ದಾನೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ, ಬೆಳದಡಿ ಗ್ರಾಮದ ಬಸವರಾಜ ಬಡಿಗೇರ ಮತ್ತು ಇನ್ನೋರ್ವ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಶಾಲೆ ಮುಗಿಸಿಕೊಂಡು 3 ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿದ್ದಾರೆ.
ಈ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ವಿದ್ಯಾರ್ಥಿ ಬಚಾವ್ ಆಗಿದ್ದಾನೆ. ಸದ್ಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಬರದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು 20 ಅಡಿ ಆಳದ ಕೆರೆಯಲ್ಲಿ ಸ್ಥಳೀಯರು ಮತ್ತು ಮುಳುಗು ತಜ್ಞರಿಂದ ಶೋಧ ನಡೆದಿದೆ.
ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರ ಹತ್ಯೆ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಶಿಗ್ಲಿ ಗ್ರಾಮದ ಮೊಹ್ಮದ್ ಫಾರೂಕ್ ಶೇಖ್ ಸನದಿ(25) ಕೊಲೆ ಆದ ಯುವಕ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸದ್ಯ ಪೊಲೀಸರಿಗೆ ಯುವಕನ ಕೊಲೆ ಕೇಸ್ ತಲೆನೋವಾಗಿದೆ. ಹಂತಕರ ಸುಳಿವಿಗಾಗಿ ಖಾಕಿ ತೀವ್ರ ಶೋಧ ನಡೆಸಿದೆ. ಸೋಕೋ ತಂಡದಿಂದ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗಾಗಿ ಶ್ವಾನ ದಳದಿಂದ ಶೋಧ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಫೋನ್ ಕಾಲ ಬಂದ ಬಳಿಕ ಮನೆಯಿಂದ ಹೋಗಿದ್ದ ಯುವಕ ಇದೀಗ ಹೆಣವಾಗಿ ಪತ್ತೆ ಆಗಿದ್ದಾನೆ. ಸದ್ಯ ಯುವಕನ ಹತ್ಯೆ ಲಕ್ಷ್ಮೇಶ್ವರ ಪಟ್ಟಣವನ್ನು ಬೆಚ್ಚಿಬಿಳಿಸಿದೆ.
For More Updates Join our WhatsApp Group :




