CM ಸಿದ್ದರಾಮಯ್ಯರಿಂದ ದಾಖಲೆಯ ಬಜೆಟ್ ಮಂಡನೆ! ಕರ್ನಾಟಕ ರಾಜಕೀಯದಲ್ಲಿ ಹೆಚ್ಚಿದ ಕುತೂಹಲ.

CM ಸಿದ್ದರಾಮಯ್ಯರಿಂದ ದಾಖಲೆಯ ಬಜೆಟ್ ಮಂಡನೆ! ಕರ್ನಾಟಕ ರಾಜಕೀಯದಲ್ಲಿ ಹೆಚ್ಚಿದ ಕುತೂಹಲ.

ರಾಜ್ಯದ ಇತಿಹಾಸದಲ್ಲಿ ಅತ್ಯಧಿಕ ಬಾರಿ ಬಜೆಟ್ ಮಂಡಿಸುವ ದಾಖಲೆಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್  ಮಂಡಿಸುತ್ತಿದ್ದು, ಇದು ರಾಜ್ಯದ ರಾಜಕೀಯ ಮತ್ತು ಆರ್ಥಿಕ ವಲಯದ ಗಮನ ಸೆಳೆದಿದೆ. ಈಗಾಗಲೇ, ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಅವರು ಜನವರಿಯಲ್ಲಿ ಪಾತ್ರರಾಗಿದ್ದು, ಇದೀಗ ಬಜೆಟ್ ಮಂಡನೆಯಲ್ಲೂ ದಾಖಲೆ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ 13 ಹಾಗೂ ಬಿಎಸ್ ಯಡಿಯೂರಪ್ಪ 8 ಬಜೆಟ್​​ಗಳನ್ನು ಮಂಡಿಸಿದ್ದರೆ ಇದೀಗ ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 6 ರಿಂದ ಮಾರ್ಚ್ 27ರವರೆಗೆ ನಡೆಯಲಿದೆ. ಒಟ್ಟು 14 ದಿನಗಳ ಅವಧಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಬಜೆಟ್ ಸಂಬಂಧಿತ ಚರ್ಚೆಗಳು ನಡೆಯಲಿವೆ.

ರಾಜಕೀಯವಾಗಿಯೂ ಈ ಬಜೆಟ್ ಬಹಳ ಮಹತ್ವ ಪಡೆದಿದೆ. ಒಂದೆಡೆ ಅಧಿಕಾರ ಹಂಚಿಕೆ ಜಿದ್ದಾಜಿದ್ದಿಯ ನಡುವೆ ಸಿದ್ದರಾಮಯ್ಯ ಬಜೆಟ್ ಸಿದ್ಧಪಡಿಸಿದ್ದು, ಐದು ಉಚಿತ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಯೋಜನೆಗಳನ್ನು ನೀಡಬೇಕಾದ ಸವಾಲೂ ಅವರ ಮುಂದಿದೆ. ರಾಜ್ಯದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆಗಳಲ್ಲಿ ಕೆಲವು ಬದಲಾವಣೆ ಮಾಡಲಿದ್ದಾರೆಯೇ ಎಂಬ ಕುತೂಹಲವೂ ಇದೆ.

ಶಿಕ್ಷಣ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಈಗಾಗಲೇ ತಿಳಿಸಿದ್ದವು.

ಕರ್ನಾಟಕದಲ್ಲಿ ಈವರೆಗೆ 1956 ರ ನಂತರ ಚುನಾವಣಾ ವರ್ಷಗಳ ಮಧ್ಯಂತರ ಆಯವ್ಯಯಗಳನ್ನು ಹೊರತುಪಡಿಸಿ 70ಕ್ಕೂ ಹೆಚ್ಚು ಬಜೆಟ್‌ಗಳು ಮಂಡನೆಯಾಗಿವೆ. 2025–26ನೇ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ. ಗಡಿ ದಾಟಿತ್ತು ಎಂಬುದು ಗಮನಾರ್ಹ.

ಒಟ್ಟಿನಲ್ಲಿ, ಸಿದ್ದರಾಮಯ್ಯ ಮಂಡಿಸುತ್ತಿರುವ ಈ ದಾಖಲೆಯ ಬಜೆಟ್ ಕರ್ನಾಟಕದ ಆರ್ಥಿಕ ಸ್ಥಿತಿ, ಅಭಿವೃದ್ಧಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ದಿಕ್ಕನ್ನು ನಿರ್ಧರಿಸುವ ಮಹತ್ವದ ಆಯವ್ಯಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *