ಮಹಿಳಾ ಪ್ರಧಾನ ಕಥೆಗೆ ಮತ್ತೆ ಒಲವು.
ಕಂಗನಾ ರನೌತ್ ಬಾಲಿವುಡ್ನ ಪ್ರತಿಭಾವಂತ ನಟಿ. ನಟನೆಗೆ ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ನಟಿ ಕಂಗನಾ ರನೌತ್. ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಭಾರತೀಯ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐದು ಪ್ರಶಸ್ತಿಗಳನ್ನು ಪಡೆದಿರುವ ಶಬಾನಾ ಆಜ್ಮಿ ಮೊದಲ ಸ್ಥಾನದಲ್ಲಿದ್ದಾರೆ. ಸಂಸದೆಯೂ ಆಗಿರುವ ನಟಿ ಕಂಗನಾ ರನೌತ್, ಕಳೆದ ಕೆಲವಾರು ವರ್ಷಗಳಿಂದಲೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಅದರಲ್ಲೂ ಐತಿಹಾಸಿಕ, ಸಾಮಾಜಿಕ ಕತೆಯುಳ್ಳ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಂಗನಾ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದು, ಈ ಸಿನಿಮಾ ಮುಂಬೈನಲ್ಲಿ ನಡೆದ ಧಾರುಣ ಘಟನೆಯೊಂದರಿಂದ ಸ್ಪೂರ್ತಿ ಪಡೆದಿದೆ.
2008 ರ ಮುಂಬೈ ದಾಳಿಯ ಬಗೆಗಿನ ಕತೆಯನ್ನು ಹೊಂದಿರುವ ಸಿನಿಮಾನಲ್ಲಿ ಕಂಗನಾ ರನೌತ್ ನಟಿಸಲಿದ್ದಾರೆ. ಆ ಕರಾಳ ದಿನದಂದು ದುರುಳ ಭಯೋತ್ಪಾದಕರು ರೈಲ್ವೆ ನಿಲ್ದಾಣ, ರೆಸ್ಟೊರೆಂಟ್, ಐಶಾರಾಮಿ ಹೋಟೆಲ್ಗಳ ಜೊತೆಗೆ ಆಸ್ಪತ್ರೆಯೊಂದರ ಮೇಲೂ ಸಹ ದಾಳಿ ಮಾಡಿದ್ದರು. ಆಸ್ಪತ್ರೆಯಲ್ಲಿ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದರು. ಆಸ್ಪತ್ರೆಯ ಮೇಲಿನ ದಾಳಿಯ ಘಟನೆಯನ್ನು ಆಧರಿಸಿ ಇದೀಗ ಸಿನಿಮಾ ಒಂದನ್ನು ನಿರ್ಮಿಸಲಾಗುತ್ತಿದ್ದು, ಸಿನಿಮಾನಲ್ಲಿ ಕಂಗನಾ ರನೌತ್ ನಾಯಕಿಯಾಗಿ ನಟಿಸಲಿದ್ದಾರೆ.
ಕಂಗನಾ ರನೌತ್, ಸಂಸದೆ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಸಂಸದೆ ಆಗುವ ಮುಂಚೆ ‘ಎಮರ್ಜೆನ್ಸಿ’ ಸಿನಿಮಾನಲ್ಲಿ ನಟಿಸಿ, ತಾವೇ ನಿರ್ದೇಶನವನ್ನೂ ಮಾಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫೇಲ್ ಆಯ್ತು. ಇದೀಗ ಅವರು ತಮಿಳು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರ ಹೊರತಾಗಿ ‘ಭಾರತ ಭಾಗ್ಯ ವಿಧಾತ’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ.
For More Updates Join our WhatsApp Group :




