ಶಿವಮೊಗ್ಗ ಸಮಿತಿ ಪದಾಧಿಕಾರಿಗಳು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು
ಶಿವಮೊಗ್ಗ: ಶಿವಮೊಗ್ಗದ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಆರಗ ಜ್ಞಾನೇಂದ್ರ ಮತ್ತಿತರ ಪದಾಧಿಕಾರಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಅಭಿನಂದಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಗೋಪಾಲಗೌಡರ ಪುತ್ರ ರಾಮಮನೋಹರ ಶಾಂತವೇರಿ, ಉಪಾಧ್ಯಕ್ಷ ಜೆ ಎ ಪುರುಷೋತ್ತಮ ಗೌಡ, ಸಮಿತಿಯ ಮಣಿಹೆಗಡೆ, ರಾಜಣ್ಣ ಪಟ್ಟಮಕ್ಕಿ ಮತ್ತಿತರರು ಇದ್ದರು.
For More Updates Join our WhatsApp Group :




