ಆಪರೇಷನ್ ಕಮಲ ಕುರಿತು DCM D.K. ಶಿವಕುಮಾರ್ ಹೇಳಿಕೆ.

ಆಪರೇಷನ್ ಕಮಲ ಕುರಿತು DCM D.K. ಶಿವಕುಮಾರ್ ಹೇಳಿಕೆ

ಬಿಜೆಪಿ ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ

ಬೆಂಗಳೂರು: “ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದರು.ವಿಧಾನಸೌಧದ ಆವರಣದಲ್ಲಿ ಹಾಗೂ ಬಿಡದಿಯ ರೆಸಾರ್ಟ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಒಡಿಶಾ ಶಾಸಕರು ರಾಮನಗರ ರೆಸಾರ್ಟ್ ನಲ್ಲಿರುವ ಬಗ್ಗೆ ಕೇಳಿದಾಗ, “ರಾಜಕೀಯ ಪಕ್ಷಗಳಿಗೆ ಕುದುರೆ ವ್ಯಾಪಾರದ ಭೀತಿ ಇರುತ್ತದೆ. ರಾಜಕೀಯ ರಂಗದಲ್ಲಿ ಎಲ್ಲಾ ಪಕ್ಷಗಳು ಎದುರಿಸುವ ವಿಚಾರ ಇದು. ಅವರು ಇಲ್ಲಿಗೆ ಬಂದಿರುವಾಗ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ನಾನು ಹಾಗೂ ನಮ್ಮ ಶಾಸಕರು ಅವರನ್ನು ಭೇಟಿ ಮಾಡಿದ್ದೇವೆ” ಎಂದು ತಿಳಿಸಿದರು.

ನಮ್ಮ ಶಾಸಕರಿಗೆ ದೊಡ್ಡ ಆಫರ್ ಗಳು ಬಂದಿವೆ : ಇದು ಹೈಕಮಾಂಡ್ ನಾಯಕರು ಕೊಟ್ಟಿರುವ ಟಾಸ್ಕ್ ಆಗಿದೆಯೇ ಎಂದು ಕೇಳಿದಾಗ, “ಯಾವ ಟಾಸ್ಕ್ ಕೂಡ ಇಲ್ಲ. ರಾಜ್ಯಸಭಾ ಚುನಾವಣೆ ಇರುವ ಕಾರಣಕ್ಕೆ ಆಪರೇಷನ್ ಕಮಲದ‌ ಭೀತಿ ಎದುರಾಗಿದೆ. ನಮ್ಮವರ ಮೇಲೆ ಒತ್ತಡವಿದೆ. ದೊಡ್ಡ, ದೊಡ್ಡ ಆಫರ್ ಗಳನ್ನು ಕೊಡುತ್ತಿದ್ದಾರೆ.  14-15 ಜನ ಎಂಎಲ್ ಎಗಳು ಇಲ್ಲಿಗೆ ಬಂದಿದ್ದಾರೆ‌. ಒಡಿಸ್ಸಾ ಪಿಸಿಸಿ ಅಧ್ಯಕ್ಷರು ಕರೆ ಮಾಡಿ ಜಾತ್ಯಾತೀತ ಪಕ್ಷಗಳೆಲ್ಲಾ ಒಂದಾಗಿದ್ದೇವೆ. ಆಪರೇಷನ್ ಕಮಲ ನಡೆಯುವ ಸಂಭವಿದೆ ಎಂದರು. ಪಕ್ಷದ ಅಧ್ಯಕ್ಷರು ಕರೆ ಮಾಡಿದಾಗ ಗೌರವ ನೀಡುವುದು ನಮ್ಮ ಕರ್ತವ್ಯ. ಬನ್ನಿ ಇಲ್ಲೇ ವಾತಾವರಣ ಚೆನ್ನಾಗಿದೆ ಎಂದು ಹೇಳಿದೆ. ಎಲ್ಲಾ ಶಾಸಕರು ಖುಷಿಯಾಗಿದ್ದಾರೆ.

ಇದರಿಂದ ನಿಮ್ಮ ಮುಂದಿನ ಹೆಜ್ಜೆ ನಿಮ್ಮ ಕನಸಿನ ಹತ್ತಿರ ಇರುತ್ತದೆಯೇ ಎಂದಾಗ, “ನಾನೇಕೆ ಕನಸು ಕಾಣಲಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ” ಎಂದರು.ಯಾವಾಗ ವಾಪಸ್ ಕರೆದುಕೊಂಡು ಹೋಗುವುದು ಎಂದಾಹ, “ಅದನ್ನ ನಾವು ತೀರ್ಮಾನ ಮಾಡುತ್ತೇವೆ” ಎಂದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *