ಕಮರ್ಷಿಯಲ್ ಸಿಲಿಂಡರ್ ಕೊಟ್ಟವರಿಗೆ 5,500 ರೂ ಮೌಲ್ಯದ ಫುಡ್ ಉಚಿತ
ಮಂಗಳೂರು: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ (Gas) ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಇತ್ತ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲೂ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದ್ದರೆ, ಮತ್ತೆ ಕೆಲ ಹೋಟೆಲ್ಗಳು ಬಂದ್ ಮಾಡಲಾಗುತ್ತಿದೆ. ಈ ಮಧ್ಯೆ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್ ನೀಡಿದೆ. ಅದೆನೇಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು 5,500 ರೂ ಮೌಲ್ಯದ ಫುಡ್ ಉಚಿತವಾಗಿ ನೀಡಲಾಗುತ್ತಿದೆ.
ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಹೋಟೆಲ್
ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆಯಿಂದ ಈ ಭರ್ಜರಿ ಆಫರ್ ನೀಡಲಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಸಂಸ್ಥೆ ತನ್ನ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್ಗೆ ಹೋದರೆ ಈ ಆಫರ್ ಸಿಗುತ್ತದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಗ್ಯಾಸ್ ಅಭಾವ ಹಿನ್ನೆಲೆ ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆ ಆಫರ್ ಮೊರೆ ಹೋಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿದವರಿಗೆ 50 ಪ್ಲೇಟ್ ಮೊಮೊಸ್, ಇನ್ನೊಂದು ಸಂಸ್ಥೆಯಿಂದ 25 ರೋಲ್ ಸಿಗಲಿದೆ. ಅಂದರೆ ಬರೋಬ್ಬರಿ 5,500 ರೂ ಮೌಲ್ಯದ ಫುಡ್ ಉಚಿತವಾಗಿ ದೊರೆಯಲಿದೆ.
ಇನ್ನು ಗ್ರಾಹಕರ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಫರ್ ಬಗ್ಗೆ ಘೋಷಣೆ ಮಾಡಿದ ಬಳಿಕ ವಿಚಾರಿಸುತ್ತಿದ್ದಾರೆ. ಆದರೆ ಈವರೆಗೆ ಯಾರು ತಂದು ಕೊಟ್ಟಿಲ್ಲ. 50 ಪ್ಲೇಟ್ ಮೊಮೊಸ್ಗೆ 5,500 ರೂಪಾಯಿ ಆಗುತ್ತೆ. ಆದರೆ ನಮಗೆ ಗ್ಯಾಸ್ ಸಿಗಬೇಕು. ಹೀಗಾಗಿ ನಮ್ಮ ಮುಖ್ಯ ಉದ್ದೇಶ ಗ್ಯಾಸ್. ನಮಗೆ ನಿತ್ಯ ಒಂದು ಸಿಲಿಂಡರ್ ಬೇಕು. ಆದರೆ ಈಗ ಗ್ಯಾಸ್ ಹೆಚ್ಚಾಗಿ ಖರ್ಚಾಗುವ ಫುಡ್ ಮಾಡುವುದನ್ನ ನಿಲ್ಲಿಸಿದ್ದೇವೆ ಎಂದು ಅನಾಸ್ ಅವರು ಹೇಳಿದ್ದಾರೆ.
For More Updates Join our WhatsApp Group :




