ಮದ್ದೂರಮ್ಮ ಜಾತ್ರೆಯಲ್ಲಿ DCM, D.K ಶಿವಕುಮಾರ್ ಪ್ರಾರ್ಥನೆ

ಮದ್ದೂರಮ್ಮ ಜಾತ್ರೆಯಲ್ಲಿ DCM, D.K ಶಿವಕುಮಾರ್ ಪ್ರಾರ್ಥನೆ

ಜನರ ದುಃಖ ದೂರವಾಗಿ ಎಲ್ಲರಿಗೂ ಶಕ್ತಿ ದೊರಕಲಿ ಎಂದು ಆಶಯ

ಹುಸ್ಕೂರು: “ಮದ್ದೂರಮ್ಮ ಪಾರ್ವತಿ ದೇವಿಉ ಸ್ವರೂಪಿ. ದುಃಖವನ್ನು ದೂರ ಮಾಡುವ ದೇವತೆ ಎಲ್ಲರ ದುಃಖಗಳನ್ನು ದೂರ ಮಾಡಲಿ. ಎಲ್ಲರಿಗೂ ಒಳ್ಳೆಯದಾಗಲಿ. ಶಕ್ತಿಯನ್ನು ನೀಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾರ್ಥಿಸಿದರು‌.

ಹುಸ್ಕೂರಿನ ಮದ್ದೂರಮ್ಮ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.

“ಶಾಸಕರಾದ ಶಿವಣ್ಣ ಅವರ ಆಹ್ವಾನದ ಮೇರೆಗೆ ಬಂದಿದ್ದೇನೆ. ಜಾತ್ರೆ ನೋಡಿ ಬಹಳ ಸಂತೋಷವಾಯಿತು. ಎಲ್ಲಾ ಊರಿನವರು ಸೇರಿ 17 ತೇರುಗಳನ್ನು ತಂದು ಬಹಳ ವಿಜೃಂಭಣೆಯಿಂದ ಜಾತ್ರೆ ಆಚರಣೆ ಮಾಡಿದ್ದಾರೆ. ಈ ಶಕ್ತಿ ಸ್ಥಾನವನ್ನು ಎಲ್ಲಾ ಭಕ್ತಾಧಿಗಳು ಕಾಪಾಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಆಶಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *