ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ಪತಿ ಮತ್ತು ಮಕ್ಕಳು
ದಿವಂಗತ ನಟಿ ಶ್ರೀದೇವಿ ಅವರಿಗೆ ಸೇರಿದ ಚೆನ್ನೈನ ಇಸ್ಟ್ ಕೋಸ್ಟ್ ರೋಡ್ನಲ್ಲಿರುವ ಸುಮಾರು 4.7 ಎಕರೆ ಜಮೀನು ಈಗ ವಿವಾದದ ವಿಷಯವಾಗಿದೆ. ಜಮೀನಿನ ಮಾಲೀಕತ್ವಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದ್ದು, ಇದೀಗ ಶ್ರೀದೇವಿಯ ಪತಿ ನಿರ್ಮಾಪಕ ಬೋನಿ ಕಪೂರ್ ಮತ್ತು ಮಕ್ಕಳಾದ ಜಾನ್ಹವಿ ಕಪೂರ್, ಖುಷಿ ಕಪೂರ್ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಆಸ್ತಿಯ ಮಾಲೀಕತ್ವಕ್ಕಾಗಿ ಮತ್ತೊಬ್ಬರಿಂದ ಸಲ್ಲಿಸಲಾಗಿರುವ ಅರ್ಜಿಗಳನ್ನು ರದ್ದು ಮಾಡಬೇಕು ಎಂದು ಅಪ್ಪ-ಮಕ್ಕಳು ಮನವಿ ಮಾಡಿದ್ದು, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಎಂಸಿ ಶಿವಕಾಮಿ ಮತ್ತು ಅವರ ಸಹೋದರ ಎಂಸಿ ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಎಂಬುವವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಇಸ್ಟ್ ಕೋಸ್ಟ್ ರೋಡ್ನಲ್ಲಿರುವ ಸುಮಾರು 4.7 ಎಕರೆ ಜಮೀನು ಕುರಿತಾಗಿ ಮೊಕದ್ದಮೆ ಹೂಡಿದ್ದರು. ಈ ಆಸ್ತಿ ತಮ್ಮ ತಾತನಿಗೆ ಸೇರಿದ್ದಾಗಿದ್ದು, ತಮಗೂ ಇದರಲ್ಲಿ ಪಾಲಿದೆ ಎಂಬುದು ಅವರ ವಾದವಾಗಿದೆ. ನಟಿ ಶ್ರೀದೇವಿ ಅವರು ಈ ಆಸ್ತಿಯನ್ನು 1988 ರಲ್ಲಿಯೇ ಖರೀದಿ ಮಾಡಿದ್ದರು. ಕಳೆದ 38 ವರ್ಷಗಳಿಂದ ಈ ಆಸ್ತಿ ಅವರ ಕುಟುಂಬದ ವಶದಲ್ಲಿಯೇ ಇದೆ.
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಟಿ.ವಿ. ತಮಿಳ್ಸೆಲ್ವಿ ಅವರು ಪ್ರಕರಣದ ವಿಚಾರಣೆ ನಡೆಸಿ, ಕೆಳಹಂತದ ನ್ಯಾಯಾಲಯದ ನಡಾವಳಿಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಮಾರ್ಚ್ 26, 2026 ಕ್ಕೆ ನಿಗದಿಪಡಿಸಲಾಗಿದೆ.
For More Updates Join our WhatsApp Group :




