ಸಿಲಿಂಡರ್ ಕೊರತೆ ರೋಗಿಗಳಿಗೆ ಸಮಸ್ಯೆ ಉಂಟುಮಾಡಿದೆ
ಗದಗ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಾದ್ಯಂತ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಅದರ ಬಿಸಿ ಇದೀಗ ಗದಗ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೂ ತಟ್ಟಿದೆ. ಗದಗದ ಸರ್ಕಾರಿ ಆಯುಷ್ಯ ಆಸ್ಪತ್ರೆಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ಎದುರಾಗಿದ್ದು, ಚಿಕಿತ್ಸೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.
ತಾತ್ಕಾಲಿಕವಾಗಿ 5ಕೆಜಿ ಸಿಲಿಂಡರ್ ಬಳಕೆ
ಪಂಚಕರ್ಮ ಚಿಕಿತ್ಸೆಗೆ ಗ್ಯಾಸ್ ಸಿಲಿಂಡರ್ ಅತ್ಯಾವಶ್ಯಕವಾಗಿದ್ದು, ಮಸಾಜ್ ಎಣ್ಣೆ ಬಿಸಿ ಮಾಡಲು ಹಾಗೂ ಸ್ಟೀಮ್ ಚಿಕಿತ್ಸೆ ನೀಡಲು ಗ್ಯಾಸ್ ಅವಶ್ಯಕವಾಗಿದೆ. ಆದರೆ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಲಭ್ಯವಿಲ್ಲದ ಕಾರಣ ಆಸ್ಪತ್ರೆ ಆಡಳಿತವು ಇದೀಗ 5 ಕೆಜಿ ಸಿಲಿಂಡರ್ಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ.
ಎಲೆಕ್ಟ್ರಾನಿಕ್ ಸಾಧನ ಬಳಸುವಂತೆ ಯೋಜನೆ
ಆಸ್ಪತ್ರೆಗೆ ಪ್ರತಿದಿನ 10 ರಿಂದ 20 ರೋಗಿಗಳು ದಾಖಲಾಗುತ್ತಿದ್ದು, ಪಾರ್ಶ್ವವಾಯು, ಮಂಡಿ ಹಾಗೂ ಬೆನ್ನುನೋವು ಸೇರಿದಂತೆ ಹಲವು ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಿಲಿಂಡರ್ ಕೊರತೆಯಿಂದ ರೋಗಿಗಳಿಗೆ ನೀಡುವ ಸ್ಟೀಮ್ ಚಿಕಿತ್ಸೆ ಹಾಗೂ ಆಹಾರ ವ್ಯವಸ್ಥೆಯಲ್ಲೂ ತೊಂದರೆ ಉಂಟಾಗಿದೆ. ಸಮಸ್ಯೆ ನಿವಾರಣೆಗೆ ಪರ್ಯಾಯವಾಗಿ ಎಲೆಕ್ಟ್ರಾನಿಕ್ ಒಲೆಗಳು ಹಾಗೂ ಕುಕ್ಕರ್ ಬಳಕೆಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಯಾವುದೇ ವ್ಯತ್ಯಯ ಉಂಟಾಗದಂತೆ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
For More Updates Join our WhatsApp Group :




