ಕಲಘಟಗಿ: ಮಳೆ, ಅಲಿಕಲ್ಲಿನಿಂದ ಮನೆಗಳಿಗೆ ಹಾನಿ.

ಕಲಘಟಗಿ: ಮಳೆ, ಅಲಿಕಲ್ಲಿನಿಂದ ಮನೆಗಳಿಗೆ ಹಾನಿ.

ಹೆಂಚು ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್.

ಕಲಘಟಗಿ : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ವಿವಿಧ ಭಾಗದಲ್ಲಿ ಇದೇ ಮಾ. 17 ರಂದು ಸುರಿದ ಭಾರಿ ಮಳೆ ಹಾಗೂ ಆಲಿಕಲ್ಲಿನಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರು ಉಚಿತವಾಗಿ ಹೆಂಚುಗಳನ್ನು ವಿತರಿಸಿದರು.

ಕಲಘಟಗಿ ಹೋಬಳಿಯ ಮಚಾಪೂರ ಗ್ರಾಮದಲ್ಲಿ ಇಂದು ಹೆಂಚುಗಳ ವಿತರಣೆ ಮಾಡಲಾಯಿತು. ಗ್ರಾಮದ 250 ಕ್ಕೂ ಹೆಚ್ಚು ಮನೆಗಳಿಗೆ  ಒಟ್ಟು 50 ಸಾವಿರ ಹೆಂಚುಗಳನ್ನು ವಿತರಣೆ ಮಾಡಲಾಯಿತು.ಶೀಘ್ರದಲ್ಲೇ ಕ್ಷೇತ್ರಕ್ಕೆ ಭೇಟಿ: ಸದ್ಯ ನಡೆಯುತ್ತಿರುವ ಬಜೆಟ್ ಅಧಿವೇಶನದ ಕಲಾಪದಲ್ಲಿ ಸಚಿವ ಲಾಡ್‌ ಅವರು ಭಾಗವಹಿಸಿದ್ದಾರೆ. ಮಳೆ ಮತ್ತು ಅಲಿಕಲ್ಲಿನಿಂದ ಉಂಟಾಗಿರುವ ಹಾನಿಯ ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ʻʻಸಚಿವ ಸಂತೋಷ್ ಎಸ್. ಲಾಡ್ ಅವರು‌, ಕ್ಷೇತ್ರದ ಜನರಿಗೆ ತೊಂದರೆಯಾದಾಗಲೆಲ್ಲಾ ತ್ವರಿತವಾಗಿ ಸ್ಪಂದಿಸಿದ್ದಾರೆ. ಈ ಬಾರಿ ಆಲಿಕಲ್ಲಿನಿಂದ ಹಾನಿಗೊಳಗಾದ ಮನೆಗಳಿಗೆ ಹೆಂಚುಗಳನ್ನು ಉಚಿತವಾಗಿ ನೀಡಿದ್ದಾರೆ. ಇಡೀ ಮತಕ್ಷೇತ್ರದಲ್ಲಿ ಜನರಿಗೆ ಕಷ್ಟ ಬಂದಾಗ ಲಾಡ್ ಅವರು ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ. ನೆರೆ ಬಂದಾಗಲೂ ಅವರು ಜನರಿಗೆ ಆಹಾರದ ಕಿಟ್ ನೀಡಿದ್ದರು. ಆಲಿಕಲ್ಲು ಮಳೆ ಸುರಿದಾಗ ಸಚಿವರು ವಿಧಾನ ಮಂಡಲದ ಕಲಾಪದಲ್ಲಿ ಭಾಗಿಯಾಗಿದ್ದರೂ ಕೂಡಾ ಕ್ಷೇತ್ರದ ಜನರ ಕಷ್ಟ ಅರಿತು ಈಗ ಹೆಂಚು ನೀಡಿದ್ದಾರೆ.ʼʼ ಎಂದು ಗ್ರಾಮಸ್ಥರು ತಿಳಿಸಿದರು. ʻʻಒಮ್ಮೆಗೇ  ಇಷ್ಟೊಂದು ಹೆಂಚುಗಳನ್ನು ಸಚಿವರು ವ್ಯವಸ್ಥೆ ಮಾಡಿದ್ದಾರೆ. ಇಂತಹ ಪುಣ್ಯದ ಕೆಲಸ ಮಾಡಿದ ಸಚಿವರಿಗೆ ಧನ್ಯವಾದಗಳು.ʼʼ ಎಂದು ಮಹಿಳೆಯೊಬ್ಬರು ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *