ನೇಮಕಾತಿಯ ಹೆಸರಲ್ಲಿ ನಕಲಿ‌ ದಾಖಲೆ ಸೃಷ್ಟಿಸಿ ವಂಚನೆ.!

ನೇಮಕಾತಿಯ ಹೆಸರಲ್ಲಿ ನಕಲಿ‌ ದಾಖಲೆ ಸೃಷ್ಟಿಸಿ ವಂಚನೆ.!

ಇದು ಪ್ರಗತಿ ಟಿವಿಯ ಎಕ್ಸ್ಲೂಸೀವ್ ಸುದ್ದಿ.

ತುಮಕೂರು : ತುಮಕೂರು ಗ್ರಾಮಾಂತರದಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡುತ್ತೇವೆ ಎಂದು ನಂಬಿಸಿ ಯುವಕರಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚನೆ ಮಾಡಲಾಗಿದೆ.ಅಪರಾಧಿಗಳು 15ಕ್ಕೂ ಹೆಚ್ಚು ಯುವಕರಿಂದ 3 ರಿಂದ 5 ಲಕ್ಷ ರೂಪಾಯಿ ತೆಗೆದುಕೊಂಡು, ನಕಲಿ ದೃಢೀಕರಣ ಪತ್ರ ನೀಡಿ ಮೋಸ ಮಾಡಿದ್ದಾರೆ ಎಂದು ವರದಿ.

ವಡ್ಡರಹಳ್ಳಿ ಗ್ರಾಮದ ತೋಟದಲ್ಲಿ ಶೆಡ್ ನಿರ್ಮಿಸಿ “ಮಾಹಿತಿ ಮತ್ತು ತರಬೇತಿ ಕೇಂದ್ರ” ಎಂದು ಪರಿಚಯಿಸಿಕೊಂಡು ಯುವಕರಿಗೆ ತರಬೇತಿ ನೀಡುವಂತೆ ನಕಲಿ ಕೇಂದ್ರ ನಡೆಸಲಾಗಿತ್ತು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ವಿ. ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಂಚನೆಯ ಜಾಲವನ್ನು ಭೇದಿಸಿದರು. ಪೋಲಿಸ್ ತನಿಖೆಗೊಡಿಸಲಾಗಿದೆ, ತರಬೇತಿ ಕೇಂದ್ರದಲ್ಲಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಐಎಎಸ್ ಆದೇಶದ ಪ್ರಕಾರ, ಮೈಸೂರು ವಿಭಾಗದ ಅರಣ್ಯ ಪ್ರದೇಶದಲ್ಲಿ ಖಾಯಂ ನೇಮಕಾತಿ ಕ್ರಮಗಳು ನಡೆಯುತ್ತಿರುವುದಾಗಿ ನೊಂದಿರುವಂತೆ ದೂರಿನಲ್ಲಿ ತಿಳಿಸಲಾಗಿದೆ.ಯುವಕರಿಂದ ಮೋಸ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *