ಚಿಕ್ಕಮಗಳೂರಿನಲ್ಲಿ ಖಾಸಗಿ ಬಸ್ ಮೇಲೆ Dawood ಹೆಸರಿನ ಬರಹ.

ಚಿಕ್ಕಮಗಳೂರಿನಲ್ಲಿ ಖಾಸಗಿ ಬಸ್ ಮೇಲೆ Dawood ಹೆಸರಿನ ಬರಹ.

“ಅಂಡರ್‌ವಲ್ಡ್ ದಿ ರಿಯಲ್ ಡಾನ್” ಎಂದು ಬರೆಯಲಾಗಿದೆ; ಭಜರಂಗದಳ ಆಕ್ರೋಶ.

ಚಿಕ್ಕಮಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಬರೆದಿರುವ ಖಾಸಗಿ ಬಸ್​ವೊಮದು ಚಿಕ್ಕಮಗಳೂರು ನಗರದಲ್ಲಿ ಕಂಡುಬಂದಿದೆ. ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್​ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್​ ಎಂದು ಬರೆಸಲಾಗಿದೆ.

ಸದ್ಯ ಇದು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದ್ದು, ಬಸ್​ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಗೆ ಪೊಲೀಸರು ಬಸ್ ಕರೆತಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *