ತುಮಕೂರಿನಲ್ಲಿ ಭೀಕರ ಕೊ*: ಅಣ್ಣನಿಂದಲೇ ತಮ್ಮ ಹ*.

ತುಮಕೂರಿನಲ್ಲಿ ಭೀಕರ ಕೊ*: ಅಣ್ಣನಿಂದಲೇ ತಮ್ಮ ಹ*.

ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು.

ತುಮಕೂರು:  ಕೌಟುಂಬಿಕ ಕಲಹಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಅಣ್ಣನಿಂದಲೇ ತಮ್ಮ ಭೀಕರವಾಗಿ ಕೊಲೆಯಾಗಿದ್ದರೆ, ತಂದೆಯೂ ಕೃತ್ಯಕ್ಕೆ ಸಾಥ್​​ ಕೊಟ್ಟಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಸ್ಟಾಲಿನ್​​ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್​​ ಮತ್ತು ತಂದೆ ಜಾನ್​​ ಪಾಲ್​​ ಎಂಬುವವರೇ ಆರೋಪಿಗಳಾಗಿದ್ದಾರೆ. ಮೃತ ನವೀನ್​​ಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಆತ ಜೊತೆಯಾಗಿ ಬಾಳಬೇಕಿದ್ದ ಯುವತಿ ಆಡಿದ್ದ ಒಂದು ಮಾತೇ ಸ್ಟಾಲಿನ್​​ ಕುಟುಂಬದಲ್ಲಿ ಬೆಂಕಿಯ ಕಿಡಿ ಹೊತ್ತಿಸಿತ್ತು ಎನ್ನಲಾಗಿದೆ. ಇದೇ ತಿಂಗಳ 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಿರಿಯ ಮಗನ ಕೊಲೆ ಮಾಡಿದ್ದ ನವೀನ್​​ಗೆ ತಂದೆ ಜಾನ್​ ಪಾಲ್​​ ಕೂಡ ಬೆಂಬಲ ನೀಡಿದ್ದು, ಆರೋಪಿಗಳು ಘಟನೆ ಬಗ್ಗೆ ಕಥೆ ಕಟ್ಟಿದ್ದರು. ಬೈಕ್ ನಿಲ್ಲಿಸುವಾಗ ಕುಸಿದು ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಸ್ಟಾಲಿನ್​​ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಸ್ಟಾಲಿನ್​ ಮೃತಪಟ್ಟಿದ್ದಾರೆ. ಮೃತದೇಹ ಕುಟುಂಬಕ್ಕೆ ನೀಡುವ ಮುನ್ನ ಜಯನಗರ ಪೊಲೀಸರಿಗೆ ಆಸ್ಪತ್ರೆ ಮಾಹಿತಿ ಹಿನ್ನೆಲೆ ಪರಿಶೀಲಿಸಿದಾಗ ಚಾಕುವಿನಿಂದ ಇರಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ತಂದೆ ಜಾನ್​​ ಪಾಲ್​​ನ ಪೊಲೀಸರು ವಿಚಾರಣೆ ನಡೆಸಿದ್ದು, ಈತ ಆರಂಭದಲ್ಲಿ ಕತೆ ಹೇಳಿದ್ದ. ಆದರೆ ಬಳಿಕ ಅಸಲಿ ಸತ್ಯವನ್ನು ಬಿಚ್ಚಿಟ್ಟ ಹಿನ್ನೆಲೆ ಕೊಲೆ ರಹಸ್ಯ ಬಯಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *