ವಿಧಾನಸಭೆಯಲ್ಲಿ ಸ್ನೇಹ, ಹೊರಗೆ ವಾಗ್ವಾದ: Siddaramaiah-Ashok ಮಾತಿನ ಸಮರ.

ವಿಧಾನಸಭೆಯಲ್ಲಿ ಸ್ನೇಹ, ಹೊರಗೆ ವಾಗ್ವಾದ: Siddaramaiah-Ashok ಮಾತಿನ ಸಮರ.

‘ಕಳ್ಳೆತ್ತು’ vs ‘ಕುಂಟೆತ್ತು’ ಹೇಳಿಕೆ; ಉಪಚುನಾವಣೆಯಲ್ಲಿ ರಾಜಕೀಯ ಕಾವು ಹೆಚ್ಚಳ.

ಬೆಂಗಳೂರು: ವಿಧಾನಸಭೆ ಬಜೆಟ್​​ ಅಧಿವೇಶನದ ವೇಳೆ ಸಿಎಂ  ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್​​. ಅಶೋಕ್​​ ನಡುವೆ ಹೇಳಿಕೊಳ್ಳುವಂತಹ ವಾಗ್ಯುದ್ಧವೇನೂ ನಡೆದಿರಲಿಲ್ಲ. ಇಬ್ಬರ ಮಾತುಗಳೂ ಕೊಂಚ ಮಟ್ಟಿಗೆ ಮೃದು ಎಂಬಂತೆಯೇ ಭಾಸವಾಗಿತ್ತು. ಆದರೆ ಇದೀಗ ಉಪ ಚುನಾವಣೆ ಅಖಾಡದಲ್ಲಿ ಇವರಿಬ್ಬರ ನಡುವಿನ ಮಾತಿನ ಸಮರ ಬಹಳ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಸಿಎಂ ಸಿದ್ದರಾಮಯ್ಯ 2028ಕ್ಕೂ ನಾವೇ ಗೆಲ್ತೇವೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಳುಮೆ ಮಾಡುವ ಎತ್ತುಗಳು ಬೇಕು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ವೋಟ್​​ ಹಾಕಬಾರದು ಎಂದಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಗೀಗ ಅಶೋಕ್​​ ಕೌಂಟರ್​​ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾ ರಾಮಯ್ಯ ಎಂದೂ ಕಿಡಿ ಕಾರಿರುವ ಅಶೋಕ್​​, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಸಿಎಂ ಸಿದ್ದರಾಮಯ್ಯ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಆರ್ಥಿಕ ಶಿಸ್ತಿನ ರೇಖೆ ದಾಟಿದೆ, ಆದ್ರೆ ದಾಟಿಲ್ಲ ಎಂಬಂತೆ ತೋರಿಸ್ತಾರೆ. ಗೃಹಲಕ್ಷ್ಮೀ ಯೋಜನೆ ಹಣ ಕೇವಲ 10 ತಿಂಗಳು ನೀಡಿ, ಎರಡು ತಿಂಗಳಿನದ್ದನ್ನು ದೋಚಿದ್ದಾರೆ. ರಾಜ್ಯದಿಂದ ವರ್ಷಕ್ಕೆ 45,600 ಕೋಟಿ ಬಡ್ಡಿ ಕಟ್ಟಬೇಕಿದ್ದು, ಪ್ರತಿ ದಿನಕ್ಕೆ 125 ಕೋಟಿ ಹಣ ಬಡ್ಡಿ ಭರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಸಾಲಗಾರ ಆಗಿದ್ದು, ರಾಜ್ಯದ ಜನರು ಈ ಸರ್ಕಾರ ಕಿತ್ತೊಗೆಯುವ ಹಾದಿಯಲ್ಲಿದ್ದಾರೆ ಎಂದು ಅಶೋಕ್​​ ಭವಿಷ್ಯ ನುಡಿದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *