ಮದುವೆಯಾದ 10 ತಿಂಗಳಲ್ಲೇ ದಾರುಣ ಅಂತ್ಯ – ಆಂಧ್ರದಲ್ಲಿ ನಡೆದ ಭೀಕರ ಘಟನೆ
ಆನೇಕಲ್: ಕಾರು ಖರೀದಿ ವಿಚಾರವಾಗಿ ಉಂಟಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಬಾಮೈದನಿಂದ ಭಾವನನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಇಂದೂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಡೆದಿದ್ದೇನು?
ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್ ಕುಮಾರ್, ಕಳೆದ 10 ತಿಂಗಳ ಹಿಂದೆ ಕುಟುಂಬಸ್ತರೇ ನೋಡಿ ಮೇಘನಾ ಎಂಬುವವರೊಂದಿಗೆ ಮದುವೆ ಮಾಡಿದ್ದರು. ಮದುವೆ ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದೆ.
ಕೊಲೆ ಮಾಡಿದ ಬೈಕ್ ಸಮೇತ ಕಾಲುವೆಗೆ ಎಸೆದ ದುಷ್ಟರು
ಕಳೆದ 15 ದಿನಗಳಿಂದ ಕಾರು ಖರೀದಿ ವಿಚಾರವಾಗಿ ಮೇಘನಾ ಹಾಗೂ ವಿನಯ್ ನಡುವೆ ಗಲಾಟೆ ಶುರುವಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ವಿನಯ್ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.
ಇನ್ನು ಬೈಕ್ ಜಿಪಿಆರ್ಎಸ್ನಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಬೆಳಿಗ್ಗೆ ವಿನಯ್ ಪೊಷಕರಿಗೆ ಮಾಹಿತಿ ನಿಡಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ವಿನಯ್ ಹುಟ್ಟೂರು ಅಪ್ಪೆ ಹಳ್ಳಿ ಅನಂತಪುರ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
For More Updates Join our WhatsApp Group :




