Colon cancer : ಮೌನವಾಗಿ ಬರುತ್ತದೆ, ಆದರೆ ಅಪಾಯಕಾರಿ.!

Colon cancer : ಮೌನವಾಗಿ ಬರುತ್ತದೆ, ಆದರೆ ಅಪಾಯಕಾರಿ.!

 “ಸೈಲೆಂಟ್ ಕ್ಯಾನ್ಸರ್” ಎಂದೇ ಹೆಸರಾಗಿರುವ ರೋಗ.

ಕೊಲನ್‌ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಬಗ್ಗೆ ನೀವು ಕೇಳಿರಬಹುದು. ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳಲ್ಲಿ ಇದು ಒಂದಾಗಿದೆ. ಜಾಗತಿಕವಾಗಿ ಕ್ಯಾನ್ಸರ್ ನಿಂದ ಸಂಭವಿಸುವ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಇದನ್ನು “ಸೈಲೆಂಟ್‌” ಕ್ಯಾನ್ಸರ್ ಎಂದು ಕೂಡ ಕರೆಯಲಾಗುತ್ತದೆ.

ಕೊಲನ್‌ ಕ್ಯಾನ್ಸರ್ ಲಕ್ಷಣಗಳು:

ಕರುಳಿನ ಕಾರ್ಯದಲ್ಲಿ ಬದಲಾವಣೆಗಳು (ಮಲಬದ್ಧತೆ ಅಥವಾ ಅತಿಸಾರ), ಮಲದ ಗಾತ್ರದಲ್ಲಿ ಬದಲಾವಣೆ, ಮಲದಲ್ಲಿ ರಕ್ತ ಬರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಹೊಟ್ಟೆ ನೋವು, ದೌರ್ಬಲ್ಯ, ಕಡಿಮೆ ಹಿಮೋಗ್ಲೋಬಿನ್ (ರಕ್ತಹೀನತೆ), ಕರುಳಿನ ಅಡಚಣೆಯಿಂದ ಉಂಟಾಗುವ ನಿರಂತರ ವಾಂತಿ ಅಥವಾ ಮಲ ವಿಸರ್ಜನೆ ಇವು ಕೊಲನ್ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಕಾಣಿಸಬಹುದಾದ ಲಕ್ಷಣಗಳಾಗಿವೆ.

ಜೀವನಶೈಲಿಯೂ ಕಾರಣವಾಗಬಹುದೇ?

ದೊಡ್ಡ ಕರುಳಿನ ಕ್ಯಾನ್ಸರ್ ವಿಷಯದಲ್ಲಿ ಜೀವನಶೈಲಿ ಅಂಶಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ. ಬೊಜ್ಜು ಮತ್ತು ಜಡ ಜೀವನಶೈಲಿ ಅಪಾಯಕಾರಕ ಅಂಶಗಳಾಗಿವೆ, ಆದರೆ ದೈಹಿಕ ಚಟುವಟಿಕೆ ಕೊಲನ್‌ ಕ್ಯಾನ್ಸರ್ ಅಪಾಯವನ್ನು 19–24% ರಷ್ಟು ಕಡಿಮೆ ಮಾಡಬಹುದು. ರೋಗ ತಡೆಗಟ್ಟುವ ಕ್ರಮಗಳಲ್ಲಿ ಸಮರ್ಪಕ ಫೈಬರ್ ಮತ್ತು ದ್ರವ ಸೇವನೆ, ಮುಖ್ಯವಾಗಿವೆ ಹಾಗೇ ಸಂಸ್ಕರಿಸಿದ ಆಹಾರಗಳು ಮತ್ತು ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ನಿಲ್ಲಿಸುವುದು ಕೂಡ ಒಳಗೊಂಡಿದೆ.

ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದೇ?

ಆರಂಭಿಕ ಹಂತದಲ್ಲೇ ಪತ್ತೆಯಾದಲ್ಲಿ ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ರೋಗ ಬೇಗ ಪತ್ತೆಯಾದಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಶೇ. 92ರಷ್ಟಿದ್ದು, ರೋಗ ಮುಂದುವರೆದಲ್ಲಿ ಬದುಕುಳಿಯುವ ಸಾಧ್ಯತೆ ಶೇ. 16ಕ್ಕೆ ಕುಸಿಯುತ್ತದೆ. ಸಕಾಲಿಕ ತಪಾಸಣೆ, ಆರೋಗ್ಯಕರ ಜೀವನಶೈಲಿ ರೋಗ ಗುಣಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *