ತಾಯಿಯ ಅಳಲು: “ಮಗಳನ್ನ ಹುಡುಕಿ ಕೊಡಿ”
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಲವ್ ಜಿಹಾದ್ ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದ್ದು, ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ಹಣ ಕೂಡಾ ತೆಗೆದುಕೊಂಡು ಹೋಗಿದ್ದಾನೆ. ಇದೀಗ ಹಣವೂ ಇಲ್ಲ, ಮಗಳೂ ಇಲ್ಲ ಎಂಬಂತಾಗಿದೆ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಇನ್ನು ಮುನ್ನಾಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಮುಸ್ಲಿಂ ಯುವತಿ ಜೊತೆ ಈ ಹಿಂದೆಯೇ ವಿವಾಹವಾಗಿತ್ತಂತೆ. ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇವೆಯಂತೆ. ಹೀಗಿದ್ದರೂ ಹೆಂಡತಿ ಮಕ್ಕಳನ್ನು ಬಿಟ್ಟು ಮುನ್ನಾ ತಂಗೆಮ್ಮಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾನೆ. ಆತನಿಗಾಗಿ ಆರಂಭದಲ್ಲಿ ಪೊಲೀಸರು ಅನೇಕ ಕಡೆ ಹುಡುಕಾಡಿದ್ದರು. ಹೈದ್ರಾಬಾದ್ ಸೇರಿದಂತೆ ಅನೇಕ ಕಡೆ ತೆರಳಿದ್ದರು. ಆದ್ರೆ ಆತ ಸಿಮ್ ಬದಲಾವಣೆ ಮಾಡಿದ್ದು, ಕುಟುಂಬದವರ ಸಂಪರ್ಕ ಕೂಡ ಇಟ್ಟುಕೊಂಡಿಲ್ಲ. ಹೀಗಾಗಿ ಮುನ್ನಾ ಮತ್ತು ತಂಗೆಮ್ಮಾ ಎಲ್ಲಿದ್ದಾರೆಂದು ಪತ್ತೆ ಮಾಡೋದು ಪೊಲೀಸರಿಗೂ ಸವಾಲಾಗಿ ಮಾರ್ಪಟ್ಟಿದೆ. ಇನ್ನು ಮುನ್ನಾ ಮೇಲೆ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣ ಕೂಡಾ ಇರೋದು ಗೊತ್ತಾಗಿದ್ದು, ಆತ ಕ್ರಿಮಿನಲ್ ಹಿನ್ನೆಲೆಯಳ್ಳ ವ್ಯಕ್ತಿ ಎಂಬುದು ಬಹಿರಂಗಗೊಂಡಿದೆ. ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಧಾರವಾಡ ಸಬ್ ಅರ್ಬನ್ ಪೊಲೀಸರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಹಿಂದೂಪರ ಸಂಘಟನೆಗಳ ಜೊತೆ ಆಗಮಿಸಿ ಪೊಲೀಸ್ ಕಮಿಷನರ್ಗೆ ಮಂಜುಳಾ ದೂರು ನೀಡಿದ್ದಾರೆ.
For More Updates Join our WhatsApp Group :



