ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ನಿರ್ಮಾಪಕರು.!
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ನ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರದ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಈ ಚಿತ್ರವು ಸ್ಥಗಿತಗೊಂಡಿದೆ ಎಂಬ ಸುದ್ದಿಯನ್ನು ನಿರ್ಮಾಣ ಸಂಸ್ಥೆಯು ಅಧಿಕೃತವಾಗಿ ನಿರಾಕರಿಸಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಡ್ರ್ಯಾಗನ್’ ಅಥವಾ NTRNeel ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣವು ನಿಂತಿದೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದವು.
ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರು ವಿವಿಧ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಇತ್ತೀಚಿನ ಫೋಟೋಶೂಟ್‌ನಲ್ಲಿ ಅವರ ಲುಕ್ ಬಗ್ಗೆ ಪ್ರಶಾಂತ್ ನೀಲ್ ಮತ್ತು ಎನ್‌ಟಿಆರ್ ಅತೃಪ್ತಿ ಹೊಂದಿದ್ದಾರೆ. ಈ ಕಾರಣದಿಂದ ಸರಿಯಾದ ಲುಕ್ ಸಿಗುವವರೆಗೆ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಈ ಕುರಿತು ಎಕ್ಸ್ (ಟ್ವಿಟ್ಟರ್) ಮೂಲಕ ಸ್ಪಷ್ಟನೆ ನೀಡಿರುವ ನಿರ್ಮಾಣ ಸಂಸ್ಥೆಯು, ಸಿನಿಮಾದ ಕೆಲಸಗಳು ಯೋಜಿತವಾಗಿಯೇ ಸಾಗುತ್ತಿವೆ ಎಂದು ಸ್ಪಷ್ಟಪಡಿಸಿದೆ. ಈ ವಿಷಯ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
‘ನಟನ ಲುಕ್ ಅಥವಾ ಚಿತ್ರೀಕರಣ ಸ್ಥಗಿತದ ಬಗ್ಗೆ ಹರಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಿನಿಮಾವು ಈ ಮೊದಲಿನ ಪ್ಲಾನ್ ಪ್ರಕಾರವೇ ಸಾಗುತ್ತಿದೆ. ಇದು ಕೇವಲ ಮುಂದಿನ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡುವ ಸಲುವಾಗಿ ನೀಡಿದ ವಿರಾಮ ಅಷ್ಟೇ. ದಯವಿಟ್ಟು ಯಾರೂ ಅಧಿಕೃತವಲ್ಲದ ಮಾಹಿತಿಯನ್ನು ನಂಬಬೇಡಿ’ ಎಂದು ‘ಮೈತ್ರಿ ಮೂವೀ ಮೇಕರ್ಸ್’ ತಿಳಿಸಿದೆ.
‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’ ಮತ್ತು ‘ಸಲಾರ್’ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್‌ಟಿಆರ್ ಜೊತೆ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ಅತ್ಯಂತ ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
For More Updates Join our WhatsApp Group :




