ಚಂದ್ರದ್ರೋಣ ಪರ್ವತದಲ್ಲಿ ಬಾಲಕಿ ನಾಪತ್ತೆ.!

ಚಂದ್ರದ್ರೋಣ ಪರ್ವತದಲ್ಲಿ ಬಾಲಕಿ ನಾಪತ್ತೆ.!

ಮಾಣಿಕ್ಯಧಾರ ಜಲಪಾತ ಬಳಿ ಕೇರಳ ಮೂಲದ 15 ವರ್ಷದ ಶ್ರೀನಂದಾ ಕಾಣೆಯಾಗಿದ್ದು ಆತಂಕ.

ಚಿಕ್ಕಮಗಳೂರು : ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ  ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಮಾಣಿಕ್ಯಧಾರ ಜಲಪಾತದ ಬಳಿ ನಾಪತ್ತೆಯಾಗಿದ್ದು, ಇನಾಮು ದತ್ತಾತ್ರೇಯ ಬಾಬುಡಂ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ.

ಎಸ್ಡಿಆರ್ಎಫ್, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಎನ್ಎಫ್ ತಂಡಗಳು ಸೇರಿ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿವೆ. ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಲಾಗಿದೆಯಾದರೂ, ಬಾಲಕಿ ಬಗ್ಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಾಲಕಿ ಎಲ್ಲಾದರೂ ಬಿದ್ದಿದ್ದಾಳಾ ಅಥವಾ ಬೇರೆಡೆ ಹೋಗಿದ್ದಾಳೆ ಎಂಬ ಅನುಮಾನದ ಮೇಲೆ ತನಿಖೆ ಮುಂದುವರಿದಿದೆ. ಕೇರಳದಿಂದಲೂ ಪೊಲೀಸರ ತಂಡ ಆಗಮಿಸಿದ್ದು, ಪೋಷಕರ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *