ಹುಬ್ಬಳ್ಳಿ–ಧಾರವಾಡದಲ್ಲಿ ‘ಲವ್ ಜಿಹಾದ್’ ಆರೋಪಗಳ ಸರಣಿ!

ಹುಬ್ಬಳ್ಳಿ–ಧಾರವಾಡದಲ್ಲಿ ‘ಲವ್ ಜಿಹಾದ್’ ಆರೋಪಗಳ ಸರಣಿ!

ಪ್ರೇಮ ಸಂಬಂಧವೋ ಅಥವಾ ಸಂಚು? ಕಳೆದ ಕೆಲ ತಿಂಗಳಲ್ಲಿ ಹೆಚ್ಚಿದ ಪ್ರಕರಣಗಳು.

ಹುಬ್ಬಳ್ಳಿ : ರಾಜ್ಯದ ವಾಣಿಜ್ಯ ನಗರ ಹುಬ್ಬಳ್ಳಿ ಮತ್ತು ಶಿಕ್ಷಣ ಕಾಶಿ ಧಾರವಾಡದಲ್ಲಿ ಅದ್ಯಾಕೋ ಗೊತ್ತಿಲ್ಲ ಮೇಲಿಂದ ಮೇಲೆ ಲವ್​​ ಜಿಹಾದ್​​ ಆರೋಪ ಪ್ರಕರಣಗಳು ಕೇಳಿಬರತೊಡಗಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಇಂತಹ ನಾಲ್ಕು ಆರೋಪಗಳು ವರದಿಯಾಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು ಇದನ್ನು ಪ್ರೇಮ ಸಂಬಂಧ ಮಾತ್ರ ಎಂದು ಕರೆದರೆ, ಇನ್ನು ಕೆಲವರು ಇದು ವ್ಯವಸ್ಥಿತವಾಗಿ ಹಿಂದೂ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಪ್ರೀತಿ ಪ್ರೇಮದ ಹೆಸರಲ್ಲಿ ಮತಾಂತರ ಮಾಡುವ ಷಡ್ಯಂತ್ರ ಎನ್ನುತ್ತಿದ್ದಾರೆ.

ಏನಿದು ಲವ್ ಜಿಹಾದ್?

ಹಿಂದೂ ಯುವತಿಯರು, ಮಹಿಳೆಯರನ್ನು ಮದುವೆಯಾಗಿ ನಂತರ ಅವರನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡೋದನ್ನು ಸಾಮಾನ್ಯವಾಗಿ ಲವ್ ಜಿಹಾದ್ ಎಂದು ಕರೆಯಲಾಗುತ್ತಿದೆ. ಈ ಲವ್​​ ಜಿಹಾದ್​​ ಕುರಿತು ನಿರ್ದಿಷ್ಟ ವ್ಯಾಖ್ಯಾನಗಳು ಇಲ್ಲದಿದ್ದರೂ ಇಂತಹ ಘಟನೆಗಳನ್ನು ಇದೇ ಹೆಸರಲ್ಲಿ ಉಲ್ಲೇಖಿಸಿಕೊಂಡು ಬರಲಾಗ್ತಿದೆ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಕೇರಳ ಲವ್ ಸ್ಟೋರಿ ಪಾರ್ಟ್ 1 ಮತ್ತು ಇತ್ತೀಚೆಗೆ ಬಿಡುಗಡೆಯಾದ ಪಾರ್ಟ್ 2 ಸಿನಿಮಾಗಳ ನಂತರ ದೇಶದಲ್ಲಿ ಲವ್ ಜಿಹಾದ್ ಎಂಬ ಪದ ಹೆಚ್ಚು ಪ್ರಚಲಿತದಲ್ಲಿದೆ. ಈ ಹಿಂದೆ ಕೇರಳದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದ್ದ ಈ ಆರೋಪಗಳೀಗ ನಮ್ಮ ರಾಜ್ಯದ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಲ್ಲಿಯೂ ಕೇಳಿಬರತೊಡಗಿವೆ.

ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿ ಬರ್ತಿರುವ ಲವ್ ಜಿಹಾದ್ ಆರೋಪ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್, ಸದ್ಯ ಯಾವೆಲ್ಲ ಪ್ರಕರಣದಲ್ಲಿ ದೂರು ನೀಡಿದ್ದಾರೋ ಅವನ್ನು ದಾಖಲಿಸಲಾಗಿದೆ. ಆರೋಪಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಅದು ಪ್ರೀತಿನಾ ಅಥವಾ ಲವ್ ಜಿಹಾದ್ ಭಾಗವಾ ಎಂಬುದು ಆ ಬಳಿಕವೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *