‘Zombie Drugs’ಕೇಸ್ ಟ್ವಿಸ್ಟ್: ಸುಳ್ಳು ಸುದ್ದಿ ವೈರಲ್ ಮಾಡಿದವರಿಗೆ ನೋಟಿಸ್.

'Zombie Drugs'ಕೇಸ್ ಟ್ವಿಸ್ಟ್: ಸುಳ್ಳು ಸುದ್ದಿ ವೈರಲ್ ಮಾಡಿದವರಿಗೆ ನೋಟಿಸ್.

ನಟ ದುನಿಯಾ ವಿಜಯ್ ಸೇರಿ ಹಲವರಿಗೆ ಪೊಲೀಸ್ ನೋಟಿಸ್ – ‘ಜೋಂಬಿ ಡ್ರಗ್ಸ್ ಇಲ್ಲ’ ಎಂದ ತನಿಖೆ

ಬೆಂಗಳೂರುಬೆಂಗಳೂರಿನಲ್ಲಿ ವೈರಲ್​ ಜೋಂಬಿ ಡ್ರಗ್ಸ್  ಕೇಸ್​​ ಬೆನ್ನತ್ತಿದ್ದ ಪೊಲೀಸರು ತನಿಖೆ ನಡೆಸಿ ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಅಸಲಿ ಸತ್ಯವನ್ನು ಹೊರಗೆಳೆದಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ವೈರಲ್​ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಕೂಡ ಮಾತನಾಡಿದ್ದಾರೆ. ಇನ್ನು ಈ ಕುರಿತಾಗಿ ವಿಡಿಯೋ ಹಂಚಿಕೊಂಡಿದ್ದ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹಿಡಿದು ಎಲ್ಲರಿಗೂ ಇದೀಗ ಪೊಲೀಸರಿಂದ ನೋಟಿಸ್  ಜಾರಿ ಮಾಡಲಾಗಿದ್ದು, ಸಂಕಷ್ಟ ಎದುರಾಗಿದೆ.

ನಟ ದುನಿಯಾ ವಿಜಯ್ ಸೇರಿ ಹಲವರಿಗೆ ನೋಟಿಸ್

ಜೋಂಬಿ ಡ್ರಗ್ಸ್ ಎಂದು ವಿಡಿಯೋ ಮಾಡಿ ವೈರಲ್​ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ಹಂಚಿಕೊಂಡ ಎಲ್ಲರಿಗೂ ಇದೀಗ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರತಿಕ್ರಿಯಿಸಿದ್ದು, ನಟ ದುನಿಯಾ ವಿಜಯ್ ಸೇರಿ ಹಲವರಿಗೆ ಈಗಾಗಲೇ ನೋಟಿಸ್​ ಜಾರಿ ಮಾಡಲಾಗಿದ್ದು, 25ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಿದ್ದೇವೆ. ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್​​ ರಾವ್​ಗೂ ನೋಟಿಸ್ ನೀಡುವ ಸಾಧ್ಯತೆ ಎಂದು ಹೇಳಿದ್ದಾರೆ.

ಇನ್ನು ಈ ವಿಡಿಯೋ ಯಾರೆಲ್ಲಾ ಶೇರ್ ಮಾಡಿದ್ದಾರೋ ಅವರಿಗೆ ನೋಟಿಸ್ ಕೊಡುತ್ತೇವೆ. ಮೆಡಿಕಲ್ ರಿಪೋರ್ಟ್ ಆಧಾರದ ಮೇಲೆ ಕಾಮೆಂಟ್ ಮಾಡಬೇಕು. ಒಬ್ಬರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಆಗಬಾರದು. ಊಹೆ ಮಾಡಿಕೊಂಡು ಪೋಸ್ಟ್ ಮಾಡುವುದು, ಆಧಾರ ರಹಿತ ಆರೋಪ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *