ತಂತ್ರಜ್ಞಾನದಿಂದ ಭರ್ಜರಿ ಯಶಸ್ಸು: 3 ಕೋಟಿ ರೂ. ಮೊಬೈಲ್ ಪತ್ತೆ ಮಾಡಿದ ಪೊಲೀಸರು.

ತಂತ್ರಜ್ಞಾನದಿಂದ ಭರ್ಜರಿ ಯಶಸ್ಸು: 3 ಕೋಟಿ ರೂ. ಮೊಬೈಲ್ ಪತ್ತೆ ಮಾಡಿದ ಪೊಲೀಸರು.

ವಿಜಯಪುರದಲ್ಲಿ 340 ಕಳುವಾದ ಮೊಬೈಲ್‌ಗಳನ್ನು CEIR ಸಾಫ್ಟ್‌ವೇರ್ ಮೂಲಕ ವಶಪಡಿಸಿಕೊಂಡ ಪೊಲೀಸ್ ಇಲಾಖೆ.

ವಿಜಯಪುರ: ಇತ್ತೀಚೆಗೆ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪತ್ತೆಗೆ ಕೇಂದ್ರ ಸರ್ಕಾರ ನೂತನ ಸಾಫ್ಟ್‌ವೇರ್​ಗಳನ್ನು ಬಿಡುಗಡೆ ಮಾಡಿದೆ. ಸಿಇಐಆರ್ ಸಾಫ್ಟ್‌ವೇರ್ ಮೂಲಕ ಜಿಲ್ಲಾ ಪೊಲೀಸರು ಕಳೆದ ಆರು ತಿಂಗಳಲ್ಲಿ ಕಳ್ಳತನವಾಗಿದ್ದ 3 ಕೋಟಿ ರೂ ಬೆಲೆ ಬಾಳುವ ಮೊಬೈಲ್​ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ ಕಳೆದುಹೋಗಿದ್ದ 340 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಪತ್ತೆಯಾದ ಮೊಬೈಲ್ಗಳ ಮೌಲ್ಯ 3 ಕೋಟಿ ರೂ ಅಧಿಕ

ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ವಿಜಯಪುರ ಹಾಗೂ ಗ್ರಾಮೀಣ ಉಪ ವಿಭಾಗಗಳ ವ್ಯಾಪ್ತಿಯ 26 ಪೊಲೀಸ್ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ 340 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಪತ್ತೆಯಾದ ಮೊಬೈಲ್‌ಗಳ ಒಟ್ಟು ಮೌಲ್ಯ ಅಂದಾಜು ಸುಮಾರು 3 ಕೋಟಿ ರೂಪಾಯಿಗೂ ಅಧಿಕ ತಿಳಿದುಬಂದಿದೆ.

ಸದ್ಯ 340 ಮೊಬೈಲ್​ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದೂರು ದಾಖಲಾತಿಯ ಆಧಾರದ ಮೇಲೆ ಆಯಾ ಮೊಬೈಲ್ ಮಾಲೀಕರುಗಳಿಗೆ ಕಾನೂನು ಪ್ರಕಾರ ಮೊಬೈಲ್​ಗಳನ್ನು ವಾಪಸ್ ನೀಡಲಾಗಿದೆ. ಸಾರ್ವಜನಿಕರು ಸಹ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಕಳ್ಳತನ ತಡೆಯುವುದಕ್ಕೆ ಹಾಗೂ ಕಳೆದುಕೊಳ್ಳದಂತೆ ಜಾಗೃತ ವಹಿಸಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *