ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊ*ದ ತಂದೆ.!

ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊ*ದ ತಂದೆ.!

ವಿಜಯಪುರದಲ್ಲಿ ಅಮಾನವೀಯ ಘಟನೆ.

ವಿಜಯಪುರ : ವಿಜಯಪುರದಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆ ನಡೆದಿದೆ. ನೋಡಲು ತನ್ನಂತೆ ಇಲ್ಲ ಎಂದು 6 ವರ್ಷದ ತನ್ನ ಮಗನನ್ನೇ ತಂದೆ ಕೊಲೆ ಮಾಡಿರುವಂತಹ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿಯ ಕೃಷ್ಣಾ ನದಿ ಬಳಿ ಮಗ ಸಿದ್ದಾರ್ಥನನ್ನ ಕರೆದುಕೊಂಡು ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ನದಿಗೆ ತಳ್ಳಿ ಹತ್ಯೆ ಮಾಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಮತ್ತು ಭಾಗ್ಯಶ್ರೀ ದಂಪತಿ ವಾಸವಾಗಿದ್ದಾರೆ. ಇವರ ಮಗ ಸಿದ್ದಾರ್ಥ. ಮಗನ ಹೋಲಿಕೆ ನಿನ್ನಂತಿಲ್ಲ ಎಂದು ಗ್ರಾಮದಲ್ಲಿ ಕೆಲವರು ಛೇಡಿಸಿದ್ದರು. ಇದರಿಂದಾಗಿ ರೋಸಿಹೋದ ಮಲ್ಲಿಕಾರ್ಜುನ ಇಂತಹದೊಂದು ಕೆಟ್ಟ ನಿರ್ಧಾರಕ್ಕೆ ಮುಂದಾಗಿದ್ದಾರೆ.

14 ವರ್ಷದಮಗಳನ್ನುಉಸಿರುಗಟ್ಟಿಸಿಕೊಂದುತಾಯಿಯೂಆತ್ಮ*ತ್ಯೆ

14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ವೈಟ್​ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗಳು ಕಾರುಣ್ಯ ಕೊಲೆಗೈದು ತಾಯಿ ಸುವರ್ಣಾ(40) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಮ್ಮಡಿಹಳ್ಳಿಯ ಮನೆಯ ಕೋಣೆಯಲ್ಲಿ ಮಗಳನ್ನು ಕೊಂದು ಬಳಿಕ ತಾಯಿ ಸುವರ್ಣಾ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ವೈಟ್​ಫೀಲ್ಡ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *