ದೇಶದ ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣ; ಕ್ವಾಂಟಮ್

ದೇಶದ ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣ; ಕ್ವಾಂಟಮ್

ಮಾರ್ಗಸೂಚಿಯ ಮೊದಲ ಹಂತಕ್ಕೆ ಚಾಲನೆ: ಸಚಿವ ಎನ್.ಎಸ್. ಬೋಸರಾಜು

ಬೆಂಗಳೂರು: ವಿಶ್ವ ಕ್ವಾಂಟಮ್ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯದ ಸಮಗ್ರ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನ್ನು ಅನಾವರಣಗೊಳಿಸುವ ಮೂಲಕ, ಇಂತಹ ಸಮಗ್ರ ಮಾಹಿತಿಯನ್ನು ಹೊರತಂದಿರುವ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು* ತಿಳಿಸಿದರು.

ಇಂದು ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿರುವ ಯು.ಆರ್. ರಾವ್ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ 𝟮𝟬𝟮𝟲 ರ ವಿಶ್ವ ಕ್ವಾಂಟಮ್ ದಿನಾಚರಣೆಯ (𝗪𝗼𝗿𝗹𝗱 𝗤𝘂𝗮𝗻𝘁𝘂𝗺 𝗗𝗮𝘆 𝟮𝟬𝟮𝟲) ‘ದೃಷ್ಟಿಕೋನದಿಂದ ವಾಸ್ತವದತ್ತ’ (𝗙𝗿𝗼𝗺 𝗩𝗶𝘀𝗶𝗼𝗻 𝘁𝗼 𝗥𝗲𝗮𝗹𝗶𝘁𝘆) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕ ರಾಜ್ಯವು ಬಹಳಷ್ಟು ಅಭಿವೃದ್ಧಿ ಸಾಧಿಸಿದೆ. ಕ್ವಾಂಟಮ್ ನಾವೀನ್ಯತೆಯಲ್ಲಿ (𝗤𝘂𝗮𝗻𝘁𝘂𝗺 𝗜𝗻𝗻𝗼𝘃𝗮𝘁𝗶𝗼𝗻) ಕರ್ನಾಟಕವು ರಾಷ್ಟ್ರೀಯ ಮುಂಚೂಣಿಯಲ್ಲಿ ಮತ್ತು ಜಾಗತಿಕ ಕೇಂದ್ರವಾಗಿ (𝗚𝗹𝗼𝗯𝗮𝗹 𝗛𝘂𝗯) ಅತ್ಯುತ್ತಮ ಸ್ಥಾನ ಪಡೆದುಕೊಳ್ಳುತ್ತಿದೆ. ಇಂದು ಕ್ವಾಂಟಮ್ ಮಾರ್ಗಸೂಚಿಯ (𝗤𝘂𝗮𝗻𝘁𝘂𝗺 𝗥𝗼𝗮𝗱𝗺𝗮𝗽) ಮೊದಲ ಹಂತದ ಅನುಷ್ಠಾನಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ‘ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್’ (𝗤𝘂𝗮𝗻𝘁𝘂𝗺 𝗘𝗰𝗼𝘀𝘆𝘀𝘁𝗲𝗺 𝗠𝗮𝗽) ಅನ್ನು ಅನಾವರಣಗೊಳಿಸಿದ್ದೇವೆ. ಈ ಮೂಲಕ ಇಂತಹ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ಹೊರತಂದ ದೇಶದ ಮೊದಲ ರಾಜ್ಯ ನಮ್ಮದಾಗಿದೆ,” ಎಂದು ಸಚಿವರು ವಿವರಿಸಿದರು.

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕ್ವಾಂಟಮ್ ಕ್ಷೇತ್ರಕ್ಕೆ ಅಗತ್ಯವಿರುವ ನುರಿತ ವೃತ್ತಿಪರ ಮಾನವ ಸಂಪನ್ಮೂಲ ಲಭ್ಯವಿದೆ. ಈ ಮಾನವ ಸಂಪನ್ಮೂಲವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಕ್ವಾಂಟಮ್ ವಲಯದಲ್ಲಿ ಕೌಶಲ್ಯಾಭಿವೃದ್ಧಿ (𝗦𝗸𝗶𝗹𝗹𝗶𝗻𝗴), ಸಂಶೋಧನೆ (𝗥𝗲𝘀𝗲𝗮𝗿𝗰𝗵) ಮತ್ತು ಸ್ಟಾರ್ಟ್-ಅಪ್‌ಗಳ ಬೆಳವಣಿಗೆಯನ್ನು ಬೆಂಬಲಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು 𝟭𝟬 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿದ್ದಾರೆ ಎಂದು ಸಚಿವರು ತಿಳಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *