NSS ಶಿಬಿರದಲ್ಲಿ ವಿಶೇಷ ಉಪನ್ಯಾಸ.
ತಿಪಟೂರು : ಕನ್ನಡ ಭಾಷೆಯು ಜಾಗತಿಕ ಭಾಷೆಯಾಗಿ ಕಷ್ಟವೇನಲ್ಲ ಏಕೆಂದರೆ ಕನ್ನಡ ಭಾಷೆಯು ಜಗತ್ತಿನ ಭಾಷೆಗಳ ಲಿಪಿಗಳ ರಾಣಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷರಾದ ಪ್ರೊ. ಬಸವರಾಜಪ್ಪ ಅಭಿಪ್ರಾಯಪಟ್ಟರು.
ಶ್ರೀಮದ್ ರಂಭಾಪುರಿ ಮಠದ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ರಾಷ್ಟಿçÃಯ ಸೇವಾ ಯೋಜನೆಯ ಐದನೆಯ ದಿನದ ಕಾರ್ಯಕ್ರಮದಲ್ಲಿ ‘ಜಾಗತಿಕ ಭಾಷೆಯಾಗಿ ಕನ್ನಡ ಹೊರಹೊಮ್ಮುವ ಬಗೆ’ ಎಂಬ ವಿಷಯದ ಬಗ್ಗೆ ಮಾತನಾಡಿ ಜಗತ್ತಿನಲ್ಲಿ ಸಮಸ್ಯೆಗಳು ವಿಪರೀತವಾಗಿರುವುದರಿಂದ ದೇಶೀ ಭಾಷೆಗಳು ಆತಂಕದಲ್ಲಿವೆ. ಇದರಲ್ಲಿ ಕನ್ನಡವೂ ಒಂದಾಗಿದೆ. ಕನ್ನಡ ಭಾಷೆಯನ್ನು ೭ ಕೋಟಿ ಜನರು ಮಾತನಾಡುತ್ತಾರೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕನ್ನಡ ಮಾತನಾಡುವ ಜನರಿದ್ದಾರೆ. ಎಂತಹ ಅಡೆತಡೆಗಳಿದ್ದರೂ ಕನ್ನಡ ಭಾಷೆಯು ಗಟ್ಟಿಯಾಗಿ ಉಳಿದಿದೆ. ಜರ್ಮನಿ, ಅಮೇರಿಕ, ದುಬೈ ಮುಂತಾದ ರಾಷ್ಟçಗಳಲ್ಲಿ ಕನ್ನಡ ಸಂಘಟನೆಗಳಿದ್ದು ಕನ್ನಡ ನುಡಿಯನ್ನು ಸಂವರ್ಧಿಸುವಲ್ಲಿ ಶ್ರಮಿಸುತ್ತಿವೆ. ಆದ್ದರಿಂದ ಕನ್ನಡ ಭಾಷೆಯು ಜಾಗತಿಕ ಭಾಷೆಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಶ್ರೀ ಸೋಮಶೇಖರ್ ಅವರು ‘ಶಿಕ್ಷಣದ ಮಹತ್ವ’ ಎಂಬ ವಿಷಯದ ಬಗ್ಗೆ ಮಾತನಾಡಿ ವಿದ್ಯೆಯು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ನಿಷ್ಕಲ್ಮಷವಾಗಿ ಅವಿರತ ಪರಿಶ್ರಮಪಟ್ಟು ಗುರು ಹಿರಿಯರ ಮಾರ್ಗದರ್ಶನವನ್ನೂ ಚಾಚು ತಪ್ಪದೇ ಅಂದುಕೊAಡ ಗುರಿ ಸಾಧಿಸಬಹುದಾಗಿದೆ. ಕಲಿಕೆಯನ್ನು ಗುರುವಿನಿಂದ ಪಡೆದು ಗುರಿಯತ್ತ ಸಾಗಿದರೆ ತಮ್ಮ ಗುರಿ ಮುಟ್ಟಬಹುದು ಎಂದರು.
ಶಿಬಿರಾಧಿಕಾರಿಗಳಾದ ಮೋಹನ ಕುಮಾರ ಎಚ್.ಆರ್, ಡಾ.ತುಕಾರಾಮ ವಿ, ಸ್ಮಿತಾ ಹೆಚ್.ಎಸ್ ಮತ್ತು ಸಹ ಶಿಬಿರಾಧಿಕಾರಿಗಳಾದ ಡಾ. ವೆಂಕಟೇಶ್ ಹಾಜರಿದ್ದರು.
For More Updates Join our WhatsApp Group :



