ಎನ್ಎಸ್ಎಸ್ ಶಿಬಿರದಲ್ಲಿ ಶಾಸಕ ಕೆ. ಷಡಕ್ಷರಿ ಕರೆ
ತಿಪಟೂರು: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರರ್ಥಿಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸೇವಾ ಮನೋಭಾವದಿಂದ ದುಡಿದಾಗ ಮಾತ್ರ ಸರ್ಥಕ ಸೇವೆಯಾಗುತ್ತದೆ ಎಂದು ಶಾಸಕ ಕೆ ಷಡಕ್ಷರಿ ಅಭಿಪ್ರಾಯಪಟ್ಟರು. ಶ್ರೀಮದ್ ರಂಭಾಪುರಿ ಮಠದ ಆಶ್ರಯದಲ್ಲಿ ಪ್ರಥಮ ರ್ಜೆ ಕಾಲೇಜು ತಿಪಟೂರಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವೆಂದರೆ ನಾಲ್ಕು ಗೋಡೆಯ ಪಠ್ಯ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಶಿಬಿರರ್ಥಿಯ ರ್ತವ್ಯವಾಗಿದೆ.
ವಿಶೇಷ ಆಹ್ವಾನಿತರಾಗಿದ್ದ ಡಾ. ನಾಗಭೂಷಣ್ ಬಗ್ಗನಡು ತುಮಕೂರು ವಿ.ವಿ.ಯ ಕರ್ಯಕ್ರಮ ಸಂಯೋಜನಾಧಿಕಾರಿ ಮಾತನಾಡಿ ಆಗಮಗಳ ಜ್ಞಾನ ಶ್ರೇಷ್ಠ ಮಾತ್ರವಲ್ಲ ಪರಿಶ್ರಮದ ಜ್ಞಾನವು ಕೂಡ ಅತ್ಯುತ್ತಮವಾಗಿದೆ. ಉನ್ನತ ಶಿಕ್ಷಣದ ನಡಿಗೆ ಸಮುದಾಯದ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಕರ್ಯಕ್ರಮಗಳು ಗ್ರಾಮೀಣ ಭಾರತವನ್ನು ಮಾದರಿಯುತವಾಗಿ ನರ್ಮಿಸಬೇಕಾಗಿದೆ. .
ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಶಶಿಕುಮಾರ್ ಎಚ್. ಸಿ ಮಾತನಾಡಿ ಶಿಬಿರರ್ಥಿಗಳು ಈ ಶಿಬಿರದಲ್ಲಿ ನಡೆದ ಉತ್ತಮ ಅಂಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕಾಗಿದೆ. ಶಿಬಿರರ್ಥಿಗಳು ತಾವು ಕಲಿತ ವಿದ್ಯೆಯನ್ನು ಸೀಮಿತಗೊಳಿಸದೆ ವಿಶಾಲವಾದ ಮನೋಭಾವದಿಂದ ರಾಷ್ಟ್ರೀಯ ಸೇವಾ ಯೋಜನೆಗೆ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು
. ಈ ಸಂರ್ಭದಲ್ಲಿ ಎನ್.ಎಸ್.ಎಸ್ ಶಿಬಿರ ಅಧಿಕಾರಿಗಳಾದ ಡಾ. ತುಕಾರಾಂ ವಿ, ಭಾರತಿ ವೈಕೆ, ಮೋಹನ ಕುಮಾರ ಎಚ್. ಆರ್ ಸಹ ಶಿಬಿರಾಧಿಕಾರಿಗಳಾದ ಡಾ. ವೆಂಕಟೇಶ್ ಎಲ್ಎಂ, ವೇದಮರ್ತಿ , ಜ್ಯೋತಿ ಎಸ್ , ಕಿರಣ್ , ಡಾ. ಕಾಂತರಾಜ್, ಡಾ. ಅನುಪ್ರಸಾದ್ ಮುಂತಾದವರು ಭಾಗಿಯಾಗಿದ್ದರು
For More Updates Join our WhatsApp Group :




