ಗ್ರಾಮೀಣ ಮಹಿಳೆಯರ‘Dutch Matt’ ಗೆ ಹೊರರಾಜ್ಯ ಮಾರುಕಟ್ಟೆ ಪ್ರವೇಶ.

ಗ್ರಾಮೀಣ ಮಹಿಳೆಯರ‘Dutch Matt’ ಗೆ ಹೊರರಾಜ್ಯ ಮಾರುಕಟ್ಟೆ ಪ್ರವೇಶ.

ಮುಖ್ಯಮಂತ್ರಿಗಳಿಂದ 8,000 ಮ್ಯಾಟ್ಗಳ ರವಾನೆಗೆ ಹಸಿರು ನಿಶಾನೆ.

ಬೆಂಗಳೂರು: ಕರ್ನಾಟಕದ ಗ್ರಾಮೀಣ ಮಹಿಳೆಯರ ಶ್ರಮ ಮತ್ತು ಕೌಶಲಕ್ಕೆ ಈಗ ರಾಷ್ಟ್ರಮಟ್ಟದ ಮನ್ನಣೆ ಸಿಕ್ಕಿದೆ. ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು ಸಿದ್ಧಪಡಿಸಿರುವ ಒಟ್ಟು ೮,೦೦೦ ಪರಿಸರ ಸ್ನೇಹಿ ಮ್ಯಾಟ್‌ಗಳನ್ನು ಹೊತ್ತ ವಾಹನಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಹಸಿರು ನಿಶಾನೆ ತೋರಿದರು. ದೆಹಲಿಗೆ ರವಾನೆಯಾಗುತ್ತಿರುವ ಈ ಉತ್ಪನ್ನಗಳು ರಾಜ್ಯದ ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿವೆ.

ಹಸಿರು ನಿಶಾನೆ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ಕೆಫೆಕ್ ಎಂ ಡಿ ಶಿವಪ್ರಕಾಶ್, ನಿಗಮದ ಅಧ್ಯಕ್ಷರಾದ ನಟರಾಜ್  ಜಾನಕಿರಾಮ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಇತಿಹಾಸ ಪ್ರಸಿದ್ಧ ‘ಡಚ್ ಮ್ಯಾಟ್’ನ ವೈಶಿಷ್ಟ್ಯ

ನಿಗಮದ ಉತ್ಪನ್ನಗಳಲ್ಲೇ ಅತ್ಯಂತ ಜನಪ್ರಿಯವಾಗಿರುವುದು ಈ ‘ಡಚ್ ಮ್ಯಾಟ್’. ೧೮ನೇ ಶತಮಾನದಲ್ಲಿ ಭಾರತದಿಂದ ಯುರೋಪಿಗೆ ಡಚ್ ವ್ಯಾಪಾರಿಗಳ ಮೂಲಕ ರಫ್ತಾಗುತ್ತಿದ್ದ ಕಾರಣಕ್ಕೆ ಇದಕ್ಕೆ ಈ ಹೆಸರು ಬಂದಿದೆ. ತೆಂಗಿನ ನಾರಿನಿಂದ ತಯಾರಾಗುವ ಈ ಮ್ಯಾಟ್‌ಗಳು ಬಲಿಷ್ಠ ಹಾಗೂ ದೀರ್ಘಕಾಲ ಬಾಳಿಕೆ ಬರುತ್ತವೆ. ವಿಶೇಷವೆಂದರೆ, ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಈ ಮ್ಯಾಟ್‌ಗಳಿಗೆ ಅಪಾರ ಬೇಡಿಕೆಯಿದೆ.

೭೦೦ ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ಆಸರೆ

ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವ ಡಚ್ ಮ್ಯಾಟ್, ಕಾರಿಡಾರ್ ಮ್ಯಾಟ್, ರೊಲಿಂಗ್ ಮ್ಯಾಟ್, ಜಿಯೋ ಟೆಕ್ಸಟ್ಟೆಲ್ಲ, ಡೆಸ್ಮ ಕಾಯರ್ ಹಾಸಿಗೆ ಮತ್ತು ದಿಂಬು ನಿಜವಾದ ಹಸಿರು ಉತ್ಪನ್ನಗಳಾಗಿವೆ. ಇವುಗಳ ಉತ್ಪಾದನೆಯಲ್ಲಿ ತೊಡಗಿರುವ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವನ್ನು ಬೆಳೆಸಲು ನಾವೆಲ್ಲಾ ತೆಂಗಿನ ನಾರಿನ ಉತ್ಪನ್ನಗಳನ್ನು ಖರೀದಿಸಿ ಪೋಷಿಸಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *