ಕಾಂಗ್ರೆಸ್ ಒಳಗೆ ಹೊಸ ಚರ್ಚೆ, ರಾಜಣ್ಣ ಹೇಳಿಕೆ ಸಂಚಲನ.
ಬೆಂಗಳೂರು : ಇತ್ತೀಚೆಗೆ ರಾಜ್ಯ ಕಾಂಗ್ರೆಸ್ನಲ್ಲಿ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ತಮ್ಮ ಆಪ್ತರೇ ಪಕ್ಷದಲ್ಲಿ ಟಾರ್ಗೆಟ್ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಸೈಲೆಂಟ್ ಆಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ಇದಕ್ಕೆ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸಿದ್ದರಾಮಯ್ಯ ಇಷ್ಟೊಂದು ಅಸಹಾಯಕ ರೀತಿ ಇದ್ದಾರೆ ಅಂದರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದಾ ಎಂದು ಯೋಚಿಸ್ತಿದ್ದೇನೆ ಎಂದು ಅವರು ಹೇಳಿರೋದು ‘ಕೈ’ ಮನೆಯಲ್ಲಿಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ರಾಜಣ್ಣ ಹೇಳಿದ್ದು ಏನು?
ನಾನು, ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ ಅಂತಾ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಹೀಗಾಗಿ ಮಾಟ ಮಂತ್ರ ಮಾಡಿಸಿರಬಹುದಾ ಅಂತ ಯೋಚಿಸ್ತಿದ್ದೇನೆ. ಮಾಟ ಮಂತ್ರದ ಬಗ್ಗೆ ಜನರು ಮಾತಾಡುತ್ತಿದ್ದಾರೆ. ನಮ್ಮ ಹಳೇ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ರು. ಕೇರಳದಲ್ಲಿ ಮಾಟ ಮಂತ್ರ ಮಾಡಿಸುತ್ತಾರೆ ಎಂದು ರಾಜಣ್ಣ ಹೇಳಿದ್ದರು.
ಇನ್ನು ರಾಜಣ್ಣ ಅವರ ಈ ಹೇಳಿಕೆಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಟಾಂಗ್ ನೀಡಿದ್ದು, ಸಿಎಂ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇರೋದು ರಾಜಣ್ಣಗೆ ಮಾತ್ರ. ಇನ್ಯಾರಿಗೂ ಆ ಶಕ್ತಿ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗೆ ಯಾರು ಆಪ್ತರು ಇರ್ತಾರೆ ಅವರೇ ಮಾಡಬೇಕು. ಬೇರೆಯವರು ಮಾಟ ಮಂತ್ರ ಮಾಡಿದ್ರೆ ಮುಖ್ಯಮಂತ್ರಿಗಳು ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಈಗ ಯಾವ ಮಾಟ ಮಂತ್ರ ನಡೆಯಲ್ಲ ಎಂದಿದ್ದಾರೆ. ಮತ್ತೊಂದೆಡೆ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜಣ್ಣಗೆ ಮಾಹಿತಿ ಇರಬಹುದು, ಇಲ್ಲ ಯಾರಾದರೂ ಹೇಳಿರಬಹುದು. ಅದಕ್ಕೆ ಅವರು ಹಾಗೆ ಹೇಳಿರಬೇಕು ಎಂದಿದ್ದಾರೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿರುವ ವಿಚಾರ ಈಗ ನಾನಾರೀತಿ ಚರ್ಚೆಗಳಿಗೆ ಕಾರಣವಾಗಿರೋದಂತೂ ಸುಳ್ಳಲ್ಲ.
For More Updates Join our WhatsApp Group :




