BWSSB ಮೂಲಕ ಮೇಲ್ಮೈ ದುರಸ್ತಿ, ಸಮಗ್ರ ಅಭಿವೃದ್ಧಿಗೆ DPR ಸಿದ್ಧತೆ.
ಬೆಂಗಳೂರು: ಬನ್ನೇರುಘಟ್ಟ ಮುಖ್ಯರಸ್ತೆಯ ಡೈರಿ ಸರ್ಕಲ್ ನಿಂದ ಕಾಳೇನ ಅಗ್ರಹಾರದವರೆಗೂ BWSSB ಹಾಗೂ BMRCL ಕಾಮಗಾರಿಗಳಿಂದ ರಸ್ತೆ ಹಾಳಾಗಿದ್ದು, ಕಾಮಗಾರಿ ಪೂರ್ಣಗೊಂಡಿರುವ ಕಡೆಗಳಲ್ಲಿ ರಸ್ತೆ ಪುನಶ್ಚೇತನಗೊಳಿಸದೆ ಇರುವುದರಿಂದ ಧೂಳು ಹೆಚ್ಚಿನ ಮಟ್ಟದಲ್ಲಿ ಹರಡುತ್ತಿರುವುದನ್ನು ಗಮನಿಸಿ ತುರ್ತಾಗಿ BWSSB ವತಿಯಿಂದ ರಸ್ತೆ ಸರಿಪಡಿಸಲು ದಿನಾಂಕ 08-04-2026 ರಂದು ನಡೆದ ತಪಾಸಣೆಯಲ್ಲಿ ಸೂಚಿಸಲಾಗಿತ್ತು.
ಅದರಂತೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ BWSSB ವತಿಯಿಂದ ಒಳಚರಂಡಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಕೈಗೊಂಡಿದ್ದು ಈ ಕಾಮಗಾರಿಯಿಂದ ರಸ್ತೆ ಮೇಲ್ಮೈ ಹಾಳಾಗಿ ಹಿನ್ನೆಲೆಯಲ್ಲಿ ಪ್ರಸ್ತುತ BWSSB ವತಿಯಿಂದ ಬನ್ನೇರುಘಟ್ಟ ಮುಖ್ಯರಸ್ತೆಯ ಕಲ್ಯಾಣಿ ಚೌಲ್ಟ್ರಿಯಿಂದ ಆರಂಭಗೊಂಡು ಐಐಎಂಬಿ (IIMB) ಮೆಟ್ರೋ ನಿಲ್ದಾಣದವರೆಗಿನ ಸುಮಾರು 1 ಕಿ.ಮೀ ರಸ್ತೆಯವರೆಗಿನ ಮೇಲ್ಮೈ ಸರಿಪಡಿಸಲಾಗಿರುತ್ತದೆ.
ಮುಂದುವರೆದು, ಬನ್ನೇರುಘಟ್ಟ ರಸ್ತೆಯ ಹೊಸೂರು ರಸ್ತೆಯಿಂದ ಕಾಳೇನ ಅಗ್ರಹಾರ ಜಂಕ್ಷನ್ ವರೆಗೆ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲು BSMILE ಯೋಜನೆ ಮಾಡಿದ್ದು ಇದರ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲಾಗುತ್ತಿದೆ.
ಆದರೆ, ಈ ವ್ಯಾಪ್ತಿಯಲ್ಲಿ ಬಿ.ಎಂ.ಆರ್.ಸಿ.ಎಲ್ (BMRCL) ಸಂಸ್ಥೆಯು ಡೈರಿ ಸರ್ಕಲ್‌ನಿಂದ ಕಾಳೇನ ಅಗ್ರಹಾರದವರೆಗಿನ ರಸ್ತೆಯನ್ನು ದಕ್ಷಿಣ ನಗರ ಪಾಲಿಕೆಗೆ ಹಸ್ತಾಂತರಿಸಿ 12.50 ಕೋಟಿ ರೂಪಾಯಿಗಳನ್ನು ಪಾಲಿಕೆಗೆ ಜಮೆ ಮಾಡಿದೆ. ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲು ಟೆಂಡರ್ ಅಂತಿಮಗೊಳಿಸಿ ಕೆಲಸವನ್ನು ವಹಿಸಿಕೊಡಲು ಸಮಯ ಬೇಕಾಗಿರುವುದರಿಂದ ಅಲ್ಲಿಯವರೆಗೆ BMRCL ಜಮೆ ಮಾಡಿರುವ ಮೊತ್ತದಿಂದ ರಸ್ತೆಯ ಹಾಳಾದ ಭಾಗಗಳಿಗೆ ಓವರ್‌ಲೇ (ಮೇಲ್ಪದರ) ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವ ಸಲುವಾಗಿ ಡಿ.ಪಿ.ಆರ್ (DPR) ಕೆಲಸವನ್ನು ಚುರುಕುಗೊಳಿಸುವಂತೆ BSMILE ಗೆ ಸೂಚಿಸಲಾಗಿರುತ್ತದೆ.
ಕಾಳೇನ ಅಗ್ರಹಾರದಿಂದ ಕೋಳಿ ಫಾರ್ಮ್‌ವರೆಗಿನ 3.65 ಕಿ.ಮೀ ವ್ಯಾಪ್ತಿಯ ಕಾಮಗಾರಿಯನ್ನು ಈಗಾಗಲೇ ಸಿ.ಎಂ.ಐ.ಡಿ.ಪಿ (CMIDP) ಅಡಿಯಲ್ಲಿ 11.50 ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಿಕೆ ಕೈಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ವ್ಯಾಪ್ತಿಯ ಕೆಲಸವನ್ನು ಸದರಿ ಟೆಂಡರ್ ಅಡಿಯಲ್ಲೇ ತಕ್ಷಣವೇ ಪೂರ್ಣಗೊಳಿಸಬೇಕು ಮತ್ತು ರಸ್ತೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ.
For More Updates Join our WhatsApp Group :




