ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ವಾರ್ನಿಂಗ್.!

ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ವಾರ್ನಿಂಗ್.!

ಅನ್ಯಾಯ ಮುಂದುವರಿದರೆ ಚುನಾವಣೆಯಲ್ಲಿ ಉತ್ತರ”

ಬೆಂಗಳೂರು: ಸುಮಾರು 70 ವರ್ಷಗಳಿಂದ ಮುಸ್ಲಿಂ ಸಮುದಾಯದಿಂದ ಕಾಂಗ್ರೆಸ್‌‍ನವರು ಮತ ಪಡೆಯುತ್ತಿದ್ದಾರೆ. ಆದರೆ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಇದರ ವಿರುದ್ಧ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಮೌಲಾನ ಮಫ್ತಿ ಸಯ್ಯದ್‌ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.

ಮುಸ್ಲಿಂ ಧರ್ಮಗುರುಗಳಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣೆಗೆರೆ ಉಪ ಚುನಾವಣೆಯಲ್ಲಿ ಹಿರಿಯ ನಾಯಕರನ್ನು ಮೂಲೆಗುಂಪೆ ಮಾಡುವ ಕೆಲಸ ಕಾಂಗ್ರೆಸ್‌‍ ನಾಯಕರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಕ್ಷದ ನಾಯಕರು ಅಧ್ಯಕ್ಷರಿಗೆ ಕಾಂಗ್ರೆಸ್‌‍ ಸರ್ಕಾರಕ್ಕೆ ಹೈಕಮಾಂಡ್‌ಗೆ ಎಚ್ಚರಿಕೆ ಕೊಡುತ್ತೇವೆ ನಮ ಹಿರಿಯ ನಾಯಕರು, ಅಬ್ದುಲ್‌ ಜಬ್ಬರ್‌ ನಸೀರ್‌ ಅಹಮದ್‌ ದೇವರಾಜ ಅರಸು ಕಾಲದಿಂದ ಕಾಂಗ್ರೆಸ್‌‍ಗೆ ಕೆಲಸ ಮಾಡಿದ್ದಾರೆ ಇವರನ್ನು ಗುರಿ ಮಾಡಿ ಮೂಲೆಗೆ ಸೇರಿಸಿದ್ದು ನಮ ಸಮುದಾಯಕ್ಕೆ ಬೇಸರ ಆಗಿದೆ. ಮುಂದೆ ನಮ ಜನನಾಯಕ ಮುಸ್ಲಿಮರ ಜೀವ ಝಮೀರ್‌ ಅಹಮದ್‌ ಖಾನ್‌ ಅವರನ್ನು ಗುರಿ ಮಾಡಿರುವುದು ಸರಿಯಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌‍ ಪಕ್ಷ ಬಂದು ಮೂರು ವರ್ಷ ಆಯಿತು. ಆದರೆ ಹಿಜಾಬ್‌ ಸಮಸ್ಯೆ ಬಗೆಹರಿಸಿಲ್ಲ. ಮೀಸಲಾತಿ ಶೇ.4 ರಷ್ಟು ವಾಪಸ್‌‍ ನೀಡಿಲ್ಲ. ಮಕ್ಕಳಿಗೆ ಚಾಕ್ಲೆಟ್‌ ಕೊಟ್ಟಂತೆ ಕಾಂಗ್ರೆಸ್‌‍ ಪಕ್ಷ ನಮ್ಮ ಸಮುದಾಯಕ್ಕೆ ಚಾಕ್ಲೆಟ್‌ ಕೊಡ್ತಿದ್ದಾರೆ. ಪಕ್ಷದಿಂದ ಗೌರವ ನಮ್ಮ ಸಮುದಾಯದ ನಾಯಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಿರುವುದು ಮುಸ್ಲಿಂ ಸಮುದಾಯ, ಅದು ಸಿದ್ದರಾಮಯ್ಯ ಇರಬಹುದು ಮುಂದೆ ಯಾರೇ ಬರಬಹುದು, ಅದು ಮುಸ್ಲಿಂರಿಂದಲೇ ಆಗಿದೆ. ಕಾಂಗ್ರೆಸ್‌‍ಗೆ ಮುಸ್ಲಿಂ ಅವಶ್ಯಕತೆ ಇದೆ. ಕಾಂಗ್ರೆಸ್‌‍ ಅವಶ್ಯಕತೆ ಮುಸ್ಲೀಮರಿಗೆ ಇಲ್ಲ. ಕಾಂಗ್ರೆಸ್‌‍ನಿಂದ ನಮ ಊಟ ರೊಟ್ಟಿ ನಡೆಯುತ್ತದೆ ಎಂದು ಭಾವಿಸಬೇಡಿ ಎಂದು ಕಿಡಿಕಾರಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *