ದರ್ಶನ್ ವಿಚಾರಕ್ಕೆ ಪ್ರಭಾವಿ ಸಚಿವರಿಗೆ ಸಿಎಂ ತರಾಟೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶದ್ಗೆ ರಾಜಾತಿಥ್ಯ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಭಾವಿ ಸಚಿವರೊಬ್ಬರಿಗೆ ತರಾಟೆ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಜೈಲಿನಲ್ಲಿ ದರ್ಶನ್ಗೆ ಐಶಾರಾಮಿ ವ್ಯವಸ್ಥೆ ನೀಡಿರುವುದರ ಹಿಂದೆ ಸಚಿವರೊಬ್ಬರ ಕೈವಾಡವಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಅದಕ್ಕೆ ಸಿಎಂ ಗರಂ ಆಗಿದ್ದು, ಆ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

‘ನೋಡಪ್ಪ ಇಂತಹ ವಿಚಾರಕ್ಕೆ ಹೋಗಬೇಡ. ಸಚಿವ ನಾಗೇಂದ್ರನಿಗೆ ಏನಾಯ್ತು. ನಿನಗೂ ಅದೇ ರೀತಿ ಆದ್ರೆ ಏನ್ಮಾಡ್ತೀಯಾ? ಇದರ ಹಿಂದೆ ನಿನ್ನ ಪಾತ್ರ ಇದ್ದರೆ ನಾಗೇಂದ್ರ ಹೋದಂತೆ ನೀನು ಹೋಗಬಹುದು’ ಎಂದು ಸಿಎಂ ತರಾಟೆ ತೆಗೆದುಕೊಂಡಿದ್ದಾರೆ. ಸಿಎಂ ತರಾಟೆ ತೆಗೆದುಕೊಳ್ಳುತ್ತಿದ್ದಂತೆ, ‘ಸರ್ ಇದರಲ್ಲಿ ನನ್ನ ಪಾತ್ರ ಇಲ್ಲ. ನಾನಗೂ ಅದಕ್ಕೂ ಸಂಬಂಧವಿಲ್ಲ. ಯಾರೋ ಸುಮ್ಮನೆ ಗುಮಾನಿ ಹಬ್ಬಿಸಿದ್ದಾರೆ’ ಎಂದಿದ್ದಾರೆ ಎನ್ನಲಾಗಿದೆ.

ಈ ಉತ್ತರಕ್ಕೆ ಸಿಎಂ ಸಿದ್ದರಾಮಯ್ಯ, ‘ನೋಡಾಪ್ಪಾ ನಿನ್ನ ಪಾತ್ರ ಇದರಲ್ಲಿ ಇದಿಯೋ ಇಲ್ವೋ ಗೊತ್ತಿಲ್ಲ. ಒಂದು ವೇಳೆ ಇಂಥಹವರ ಸಹವಾಸ ಇದ್ದದ್ದು ಗೊತ್ತಾದ್ರೆ ನಾಗೇಂದ್ರಗೆ ಆದಂತೆ ನಿನಗೂ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಆಗ ಪ್ರಭಾವಿ ಸಚಿವರು, ‘ಇಲ್ಲ ಸರ್ ಅವನ ವಿಚಾರಕ್ಕೆ ನಾನು ಹೋಗಿಲ್ಲ, ಹೋಗುವುದು ಇಲ್ಲ’ ಎಂದಿದ್ದಾರೆ.

ಇತ್ತೀಚೆಗೆ ದರ್ಶನ್ ಜೈಲಿನಲ್ಲಿ ತನ್ನ ಗ್ಯಾಂಗ್ನೊಂದಿಗೆ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿತ್ತು. ದರ್ಶನ್ ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ರೇಣುಕಾಶ್ವಾಮಿ ಕುಟುಂಬಸ್ಥರಿಗೆ ಮಾತ್ರವಲ್ಲದೆ ಜನಾಕ್ರೋಶಕ್ಕೆ ಗುರಿಯಾಗಿತ್ತು.

ನಟ ದರ್ಶನ್ ಜೈಲು ನಿಯಮಗಳನ್ನು ಗಾಳಿಗೆ ತೂರಿ ಐಶಾರಾಮಿ ಜೀವನ ನಡೆಸುತ್ತಿರುವುದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಇದರ ಹಿಂದೆ ಪ್ರಭಾವಿ ಸಚಿವರಿದ್ದು ಅವರ ಮೌಖಿಕ ಆದೇಶ ಕಾರಣ ದರ್ಶನ್ಗೆ ರಾಜಾತಿಥ್ಯ ನೀಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿ, ಅನುಮಾನವಿರುವ ಸಚಿವರಿಗೆ ಕರೆ ಮಾಡಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್

ಪರಪ್ಪನ ಅಗ್ರಹಾರದಿಂದ ದರ್ಶನ್ ಅವರ ಫೋಟೋ ಲೀಕ್ ಆದ ಬೆನ್ನಲ್ಲಿಯೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿದ್ದಾರೆ. ನಟ ದರ್ಶನ್ ಅವರನ್ನು ಗುರುವಾರ ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುತ್ತಿದ್ದಂತೆ ಭಾರೀ ಸುದ್ದಿಯಾದರು. ಅವರು ಧರಿಸಿದ್ದ ಕೂಲಿಂಗ್ ಗ್ಲಾಸ್, ಅವರು ಜೈಲಿಗೆ ಮಾಡಲಾಗಿದ್ದ ಬ್ಯಾಂಡೇಜ್, ಅವರ ಕೈಯಲ್ಲಿದ್ದ ಬಾಟಲ್, ಜಾಕೆಟ್ ಎಲ್ಲವೂ ಭಾರೀ ಸುದ್ದಿಯಾಯಿತು. ಅಂತೂ ಇಂತೂ ದರ್ಶನ್ ಜೈಲಿನ ಕ್ಯಾಂಪ್ಸ್ಗೆ ಎಂಟ್ರಿ ಕೊಡುತ್ತಿದ್ದಂತೆ ಸುದ್ದಿಯಾಗಿದ್ದಾರೆ ದರ್ಶನ್. ಇನ್ನೂ ಬಳ್ಳಾರಿ ಜೈಗಿಗೆ ಬರುವಾಗ ಕೆಲ ಪುಸ್ತಕಗಳನ್ನೂ ಅವರು ತಂದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *