ಮುಂಗಾರು ಸಿದ್ಧತೆ: ಮಾಕ್ ಡ್ರಿಲ್ ಕಡ್ಡಾಯ.!

ಮುಂಗಾರು ಸಿದ್ಧತೆ: ಮಾಕ್ ಡ್ರಿಲ್ ಕಡ್ಡಾಯ

ನಗರ ಪಾಲಿಕೆಗಳಿಗೆ ಸುಷಮಾ ಗೋಡಬೋಲೆ ಸೂಚನೆ

ಬೆಂಗಳೂರು: ಪೂರ್ವ ಮುಂಗಾರು ಕುರಿತಂತೆ ದಿನಾಂಕ: 10-04-2026 ರಂದು ನಗರಾಭಿವೃದ್ಧಿ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳು ನಿಡಿದ ನಿರ್ದೇಶನದ ಮೇರೆಗೆ ಜಿಬಿಎ ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಗೆ *ತ್ವರಿತ ಪ್ರತಿಕ್ರಿಯಾ ತಂಡಗಳ ಮೂಲಕ ಪ್ರತಿ ನಗರ ಪಾಲಿಕೆ ಮಟ್ಟದಲ್ಲಿ ಮಾಕ್ ಡ್ರಿಲ್ ಗಳನ್ನು ನಡೆಸುವಂತೆ ಎಫ್.ಇ.ಸಿ.ಸಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ ಅವರು ಅಧಿಕಾರಿಗಳಿಗೆ ಸೂಚಿಸಿದರು.*

ನಗರದಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯ ಪೂರ್ವ ಸಿದ್ಧತೆ ಕುರಿತು ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆ ಹಾಗೂ ಪ್ರವಾಹ ತುರ್ತು ಸಂದರ್ಭಗಳಲ್ಲಿ ಅಥವಾ ಯಾವುದೇ ಹವಾಮಾನ ವೈಪರೀತ್ಯದ ಸ್ಥಿತಿ ಉದ್ಭವಿಸಿದ್ದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು ಅವಶ್ಯವಾಗಿದ್ದು, ತ್ವರಿತವಾಗಿ ಮಾಕ್ ಡ್ರಿಲ್ ಗಳನ್ನು ನಡೆಸುವಂತೆ ತಿಳಿಸಿದರು.

ಅಪಾಯಕಾರಿ ಮರ, ಮರದ ಕೊಂಬೆಗಳು/ರೆಂಬೆಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಲು ಸೂಕ್ತ ಸ್ಥಳಗಳನ್ನು ಗುರುತಿಸಿ ಅಗತ್ಯ ವ್ಯವಸ್ಥೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

*ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ಸ್ವಯಂಸೇವಕ ವೈದ್ಯರನ್ನು ಗುರುತಿಸಿ:*

ಮಳೆಯ ಅವಧಿಯಲ್ಲಿ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಸ್ವಯಂ ಸಹಾಯಕ ಗುಂಪುಗಳು, ಸ್ವಯಂಸೇವಕರು, ಎನ್.ಎಸ್.ಎಸ್., ಎನ್.ಸಿ.ಸಿ ಹಾಗೂ ಸ್ವಯಂಸೇವಕರನ್ನು, ಆಪತ್ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಚ್ಛಿಸುವ ಸ್ಥಳೀಯ ವೈದ್ಯರನ್ನು ಗುರುತಿಸಿ ಒಂದು ಪಟ್ಟಿಯನ್ನು ತಯಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ, ಈ ಸಂಬಂಧ ತಿಂಗಳ ಅಂತ್ಯದೊಳಗಾಗಿ ವರದಿ ಸಲ್ಲಿಸಲು ತಿಳಿಸಿದರು.

ಈ ವೇಳೆ ಉಪ ಆಯುಕ್ತರಾದ ಗಾಯತ್ರಿ ನಾಯಕ್, ರವೀಂದ್ರ ಕರಲಿಂಗಣ್ಣನವರ್, ಮುಖ್ಯ ಅಭಿಯಂತರರು, ಮುಖ್ಯ ಆರೋಗ್ಯಾಧಿಕಾರಿ, ಸಹಾಯಕ ಆಯುಕ್ತರು, ಬೆಸ್ಕಾಂ, ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *