ಆರ್.ಟಿ.ನಗರದ ಮನೆಯಲ್ಲಿ ದಾರುಣ ಘಟನೆ – ಪತಿ ಪತ್ನಿ ಸಾ*ಗೆ ಕೌಟುಂಬಿಕ ಕಲಹ ಶಂಕೆ
ಬೆಂಗಳೂರು: ಸಿಲಿಕಾನ್ ಸಿಟಿ ಆರ್.ಟಿ.ನಗರದ ಗಂಗೇನಹಳ್ಳಿ ಪ್ರದೇಶದ ಮನೆಯೊಂದರಲ್ಲಿ ದಂಪತಿಯ ಶವ ಪತ್ತೆಯಾಗಿದೆ.10 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮಿತ್ರಾ ಮತ್ತು ಡೇವಿಡ್ ಮೃತ ದಂಪತಿಗಳು ಎಂದು ಗುರುತಿಸಲಾಗಿದೆ.ಪತಿ ಡೇವಿಡ್, ಪತ್ನಿ ಸುಮಿತ್ರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ . ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ
ಡೇವಿಡ್ ಕೈಗಳ ಮೇಲೆ ಪ್ರತಿರೋಧದ ಗಾಯಗಳ ಗುರುತುಗಳು ಕಂಡುಬಂದಿದ್ದು, ಘಟನೆಗೆ ಮತ್ತಷ್ಟು ಸಂಶಯ ಹುಟ್ಟಿಸಿದೆ.ಸ್ಥಳಕ್ಕೆ ಆರ್.ಟಿ.ನಗರ ಪೊಲೀಸರು ಹಾಗೂ ಸೊಕೊ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರ ಶವಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ನಂತರ ನಿಜಾಂಶ ಬಹಿರಂಗವಾಗಲಿದೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗುತ್ತಿದೆಯಾದರೂ, ಪೋಸ್ಟ್‌ಮಾರ್ಟಂ ವರದಿ ಮತ್ತು ಪೊಲೀಸ್ ತನಿಖೆ ಬಳಿಕವೇ ನಿಖರ ಕಾರಣ ತಿಳಿಯಲಿದೆ.
For More Updates Join our WhatsApp Group :




