ಮಂಗಳೂರಿಗರೇ ಎಚ್ಚರ! ಅಪಾಯಕಾರಿಯಾಗಿದೆ ತಲುಪಿದೆ ನಗರದ ವಾಯು ಗುಣಮಟ್ಟ
ಬೆಂಗಳೂರು : ರಾಜ್ಯದ ಏರ್ ಕ್ವಾಲಿಟಿಯಲ್ಲಿ ಹಲವು ದಿನಗಳಿಂದ ಸುಧಾರಣೆ ಕಂಡಿತ್ತು. ಆದರೆ ಇಂದು ಏಕಾಏಕಿ ಮಂಗಳೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಜೊತೆಗೆ ಉಡುಪಿಯ ಗಾಳಿಯೂ ಉಸಿರಾಟಕ್ಕೆ ಯೋಗ್ಯವಲ್ಲದ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 110ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 150ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ
- ಬೆಂಗಳೂರು – 110
- ಮಂಗಳೂರು-156
- ಮೈಸೂರು – 134
- ಬೆಳಗಾವಿ – 136
- ಕಲಬುರ್ಗಿ-136
- ಶಿವಮೊಗ್ಗ –116
- ಬಳ್ಳಾರಿ – 151
- ಹುಬ್ಬಳ್ಳಿ- 100
- ಉಡುಪಿ –125
- ವಿಜಯಪುರ – 109
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
For More Updates Join our WhatsApp Group : https://chat.whatsapp.com/JVoHqE476Wn3pVh1gWNAcH




