ಆಸ್ತಿ ವಿವಾದವೇ ಕಾರಣ: ಮಾಜಿ ಗ್ರಾ.ಪಂ ಸದಸ್ಯನ ಹ* ಬಯಲು.
ವಿಜಯಪುರ : ಅಲಿಯಾಬಾದ್ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ರಾಜು ಖರಿ (48) ಏಪ್ರಿಲ್ 14ರಂದು ಭೀಕರವಾಗಿ ಕೊಲೆಯಾಗಿದ್ದರು. ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದ ಬಳಿ ಸಿನಿಮಾ ಸ್ಟೈಲ್ನಲ್ಲಿ ದಾಳಿ ನಡೆಸಿದ್ದ ಆರೋಪಿಗಳು ರಾಜು ಅವರನ್ನು ಬರ್ಬರವಾಗಿ ಕೊಂದಿದ್ದರು. ಪ್ರಕರಣ ಸಂಬಂಧ ಆರೋಪಿಗಳ ಕೈಗೆ ಕೋಳ ತೊಡಿಸಿರುವ ಪೊಲೀಸರು, ಆಸ್ತಿ ವಿವಾದವೇ ಡೆಡ್ಲಿ ಮರ್ಡರ್ಗೆ ಕಾರಣ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ಗ್ರಾಮ ಪಂಚಾಯತಿಯ ಮಾಜಿ ಸದಸ್ಯನ ಕೊಲೆಗೆ ಅಸಲಿ ಕಾರಣ ಏನೆಂಬುದು ಬಹಿರಂಗಗೊಂಡಿದೆ.
ತಮ್ಮ ತೋಟದ ಮನೆಯಿಂದ ವಿಜಯಪುರದತ್ತ ಪ್ರಯಾಣ ಮಾಡುತ್ತಿದ್ದ ರಾಜು ಖರಿ ಅವರ ಥಾರ್ ಜೀಪ್ಗೆ ಮೊದಲು ಟಿಪ್ಪರ್ ಡಿಕ್ಕಿ ಹೊಡೆಸಲಾಗಿತ್ತು. ಅಪಘಾತದ ತೀವ್ರತೆಗೆ ಥಾರ್ ಜೀಪ್ ಮುಂಭಾಗ ಜಖಂ ಆಗಿದ್ದು, ಇದೇ ವೇಳೆ ವಾಹನದ ಬಳಿ ಆಗಮಿಸಿದ್ದ ಹಂತಕರು ಜೀಪ್ ಡೋರ್ನ ದೊಡ್ಡ ಕಲ್ಲಿನಿಂದ ಜಜ್ಜಿ ಒಡೆದು, ರಾಜು ತಲೆ ಮತ್ತು ಎದೆ ಭಾಗಕ್ಕೆ 6 ಸುತ್ತು ಗುಂಡಿನ ದಾಳಿ ನಡೆಸಿದ್ದರು.
ಇನ್ನು ಕೊಲೆಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗಿದೆ. ಖರಿ ಕುಟುಂಬಕ್ಕೆ ಸೇರಿದ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ರಾಜೂ ಖರಿ ಭಾಗಿಯಾಗಿದ್ದರು. ಇದೇ ವಿಚಾರವಾಗಿ ಪ್ರಮುಖ ಆರೋಪಿ ಅಬಾಶ್ಯಾ ಕೋಪಕೊಂಡಿದ್ದ. ಇದೇ ಸಿಟ್ಟಲ್ಲಿ ಆರೋಪಿಗಳು ರಾಜು ಕೊಲೆ ಮಾಡಿರುವ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ. ಬಂಧಿತರಿಂದ 2 ಕಂಟ್ರಿ ಪಿಸ್ತೂಲ್ ಗಳು, 7 ಮೊಬೈಲ್, 2 ಮೋಟರ್ ಸೈಕಲ್ ಗಳು, ಟಿಪ್ಪರ್ ಮತ್ತು ಕಾರನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
For More Updates Join our WhatsApp Group :




