ಸ್ವಾಮೀಜಿ vs ಟ್ರಸ್ಟ್: ಲೆಕ್ಕ ವಿವಾದಕ್ಕೆ ಹೊಸ ತಿರುವು
ದಾವಣಗೆರೆ : ವಚನಾಂದ ಸ್ವಾಮೀಜಿಯ ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. ಮಠದಿಂದ ಉಚ್ಚಾಟನೆ ಆದರೂ ಹಠದಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸ್ವಾಮೀಜಿ ಶಕ್ತಿ ಪ್ರದರ್ಶನಕ್ಕೆ ನಿನ್ನೆ ಹರಿಹರ ಪಂಚಮಸಾಲಿ ಮಠ ವೇದಿಕೆ ಆಗಿತ್ತು. ಸ್ವಾಮೀಜಿಗೆ ಭಕ್ತರ ಬೆಂಬಲ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಟ್ರಸ್ಟಿನವರು, ಇದೀಗ ಲೆಕ್ಕ ನೀಡಲು ಮುಂದಾಗಿದ್ದಾರೆ. ಆದರೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವಿನ ಸಂಘರ್ಷ ಮುಂದುವರೆದಿದೆ.
ಈ ಸಂಘರ್ಷಕ್ಕೆ ಅಸಲಿ ಕಾರಣವೇನು?
ಈ ಸಂಘರ್ಷಕ್ಕೆ ಮೂಲ ಕಾರಣ ಏಪ್ರಿಲ್ 13ರಂದು ನಡೆದ ಆ ಘಟನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠ. ಒಂದು ಕಡೆ ಲೆಕ್ಕ ಕೊಡಿ ಎಂದು ಭಕ್ತರು ಸಂಘರ್ಷಕ್ಕಿಳಿದಿದ್ದರು.. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಠ ಬಿಟ್ಟು ಸ್ವಾಮೀಜಿ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಭಕ್ತರು ಸ್ವಾಮೀಜಿಯನ್ನ ಬಿಟ್ಟು ಕೊಡಲಿಲ್ಲ. ಹೀಗಾಗಿ ಸ್ವಾಮೀಜಿ ಮಠದಲ್ಲಿಯೇ ಪೂಜೆ ಮಾಡುತ್ತಾ, ಬಂದ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.
ಒಟ್ಟಾರೆ ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವೆ ಸಂಘರ್ಷ ಮುಂದುವರೆದಿದ್ದು, ಇಬ್ಬರು ಸಮಬಲದ ಹೋರಾಟ ನಡೆಸಿದ್ದಾರೆ. ಲೆಕ್ಕಾ ಕೊಡಿ ಅಂದರೆ ಸ್ವಾಮೀಜಿಯನ್ನೇ ಪೀಠದಿಂದ ಉಚ್ಛಾಟನೆ ಮಾಡಿದ್ದ ಧರ್ಮದರ್ಶಿ ಸಮಿತಿ ಇದೀಗ ರಾಗ ಬದಲಾಯಿಸಿದ್ದು, ಏಪ್ರಿಲ್ 27ಕ್ಕೆ ಲೆಕ್ಕಾ ಕೊಡಲು ಮುಂದಾಗಿದೆ. ಆದರೆ ಇದನ್ನ ಒಪ್ಪಲು ಸ್ವಾಮೀಜಿ ಪರ ಭಕ್ತರು ಸಿದ್ಧಲಿಲ್ಲ. ರಾಜ್ಯಾದ್ಯಂತ ಎಷ್ಟು ಜನ ಭಕ್ತರು ಹಣ ಕೊಟ್ಟಿದ್ದು, ಅವರ ಪಟ್ಟಿ ಕೊಡಿ. ಮೇಲಾಗಿ ಲೆಕ್ಕ ಕೊಡುವ ಮೊದಲು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಪ್ರಕರಣ ನೀಡಿ ಎಂದು ಪಟ್ಟುಹಿಡಿದಿದ್ದಾರೆ.
For More Updates Join our WhatsApp Group :




