SSLC ಫಲಿತಾಂಶದಲ್ಲಿ ದೊಡ್ಡ ತಪ್ಪು: 92ರ ಬದಲು 48 ಅಂಕ; ವಿದ್ಯಾರ್ಥಿ ಆತಂಕ

SSLC ಫಲಿತಾಂಶದಲ್ಲಿ ದೊಡ್ಡ ತಪ್ಪು: 92ರ ಬದಲು 48 ಅಂಕ; ವಿದ್ಯಾರ್ಥಿ ಆತಂಕ

ಚಿಕ್ಕಮಗಳೂರಿನಲ್ಲಿ ಮೌಲ್ಯಮಾಪನ ಯಡವಟ್ಟು; ಸರಿಪಡಿಸಲು ಪೋಷಕರ ಮನವಿ

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿಯ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಯ SSLC ಫಲಿತಾಂಶದಲ್ಲಿ ಮೌಲ್ಯಮಾಪಕರಿಂದ ಗಂಭೀರ ಯಡವಟ್ಟು ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ.ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿ ರಾಮದತ್ತ ಶರ್ಮ ಅವರಿಗೆ 92 ಅಂಕಗಳು ಬರಬೇಕಾಗಿದ್ದರೂ, ಫಲಿತಾಂಶದಲ್ಲಿ ಕೇವಲ 48 ಅಂಕಗಳು ಮಾತ್ರ ನಮೂದಾಗಿವೆ.

ಇಂಟರ್ನಲ್‌ನಲ್ಲಿ 20 ಅಂಕಗಳು ಹಾಗೂ ಉತ್ತರ ಪತ್ರಿಕೆಯ ಮೌಲ್ಯಮಾಪನದಲ್ಲಿ 72 ಅಂಕಗಳು (80ಕ್ಕೆ) ದಾಖಲಾಗಿದ್ದರೂ, ಕಂಪ್ಯೂಟರ್ ಎಂಟ್ರಿ ವೇಳೆ ತಪ್ಪು ಸಂಭವಿಸಿರುವುದು ಕಂಡುಬಂದಿದೆ.ಈ ತಪ್ಪಿನಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಧಕ್ಕೆ ಆಗುವ ಸಾಧ್ಯತೆ ಇದ್ದು, ಪೋಷಕರು ಮತ್ತು ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಪ್ಪನ್ನು ತಕ್ಷಣ ಸರಿಪಡಿಸುವಂತೆ ವಿದ್ಯಾರ್ಥಿ ಪರೀಕ್ಷಾ ಮಂಡಳಿಗೆ ಮನವಿ ಸಲ್ಲಿಸಿದ್ದಾನೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *