ಬೆಳ್ಳಂಬೆಳಗ್ಗೆ ಪಿ.ಜಿ.ಪಾಳ್ಯ ವಲಯದಲ್ಲಿ ಪ್ರವಾಸಿಗರಿಗೆ ಕಪ್ಪು ಚರತೆಯ ಆಕರ್ಷಕ ದೃಶ್ಯ
ಚಾಮರಾಜನಗರ: Chamarajanagar ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಫಾರಿ ವಲಯದಲ್ಲಿ ಅಪರೂಪದ ಕರಿಚಿರತೆ ಕಾಣಿಸಿಕೊಂಡಿದ್ದು ಪ್ರವಾಸಿಗರ ಗಮನ ಸೆಳೆದಿದೆ.ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಮೆಲನಿಸ್ಟಿಕ್ ಗುಣಲಕ್ಷಣಗಳಿರುವ ಈ ಕಪ್ಪು ಚಿರತೆಯ ದರ್ಶನವಾಗಿದೆ.
ಅಪರೂಪದ ಈ ಕರಿಚಿರತೆಯನ್ನು ಕಂಡ ಪ್ರವಾಸಿಗರು ಅತೀವ ಸಂತಸ ವ್ಯಕ್ತಪಡಿಸಿದ್ದು, ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ನಾಗರಹೊಳೆ ಮತ್ತು ಬಂಡೀಪುರ ಅರಣ್ಯಗಳ ಭಾಗವಾಗಿರುವ ಈ ಪ್ರದೇಶವು ಅಪರೂಪದ ವನ್ಯಜೀವಿಗಳಿಗೆ ಆಶ್ರಯವಾಗಿದೆ. ಕರಿಚಿರತೆಯ ದರ್ಶನವು ಸಫಾರಿ ವಲಯದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
For More Updates Join our WhatsApp Group :




