ಮುಂದಿನ ತಲೆಮಾರಿಗೆ ನೃತ್ಯ ಪರಿಚಯಿಸಿ – ಕುಲಸಚಿವರು ಕೆ.ಟಿ.ಶಾಂತಲಾ
ಬೆಂಗಳೂರು : ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗ ವತಿಯಿಂದ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ನೃತ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. “ಲಯ,ಬದ್ದತೆ, ಅಭಿವ್ಯಕ್ತಿ ಎಲ್ಲವನ್ನೂ ಒಳಗೊಂಡ ನೃತ್ಯವೂ ಭಕ್ತಿಗೆ ಸಮಾನವಾದುದು. ನೃತ್ಯ ಕೇವಲ ಚಲನೆಯಲ್ಲ ಅದು ಸಂಪೂರ್ಣ ಕಲಾರೂಪವಾಗಿದ್ದು ಪ್ರಕೃತಿಯೊಂದಿಗೆ ಬೆಸೆಯುವ ಕಲಾ ಪ್ರಕಾರ. ಮುಂದಿನ ತಲೆಮಾರಿಗೆ ನೃತ್ಯವನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಕಲಾಮಂಡಲಂ ಉಷಾ ದಾತಾರ್ ಅವರು ದಕ್ಷಿಣ ಭಾರತದ ವಿವಿದ ಶಾಸ್ತ್ರೀಯ ನೃತ್ಯಗಳ ಸೂಕ್ಷ್ಮತೆಗಳ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಹಾಗೂ ಭರತನಾಟ್ಯ, ಕೂಚಿಪುಡಿ,ಯಕ್ಷಗಾನ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರು ಡಾ. ಹಂಸಿನಿ ನಾಗೇಂದ್ರ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ನಾಗೇಶ್ ವಿ ಬೆಟ್ಟಕೋಟೆ, ಸಹಾಯಕ ಪ್ರಾಧ್ಯಪಕ ಡಾ.ಎಸ್.ಶಿವಣ್ಣ ಉಪಸ್ಥಿತರಿದ್ದರು.
For More Updates Join our WhatsApp Group :




